Select Your Language

Notifications

webdunia
webdunia
webdunia
webdunia

ಐಶ್ವರ್ಯ ಬಚ್ಚನ್‌ರೊಂದಿಗೆ ಅಫೇರ್‌: ಸಲ್ಮಾನ್‌ ಹೇಗೆ ಸೇಡು ತೀರಿಸಿಕೊಂಡ ಗೊತ್ತಾ ಎಂದ ವಿವೇಕ್ ಓಬೆರಾಯ್

ಐಶ್ವರ್ಯ ಬಚ್ಚನ್‌ರೊಂದಿಗೆ ಅಫೇರ್‌: ಸಲ್ಮಾನ್‌ ಹೇಗೆ ಸೇಡು ತೀರಿಸಿಕೊಂಡ ಗೊತ್ತಾ ಎಂದ ವಿವೇಕ್ ಓಬೆರಾಯ್
ಮುಂಬೈ , ಮಂಗಳವಾರ, 19 ಸೆಪ್ಟಂಬರ್ 2017 (19:17 IST)
ವಿವೇಕ್ ಓಬೆರಾಯ್ ತನ್ನ ವೃತ್ತಿ ಜೀವನದಲ್ಲಿ ಅದ್ಭುತ ಆರಂಭವನ್ನು ಹೊಂದಿದ್ದರು, ಆದರೆ ಸಲ್ಮಾನ್ ಖಾನ್‌ನೊಂದಿಗಿನ ವಿರಸ ನಿಧಾನವಾಗಿ ಅವರ ವೃತ್ತಿ ಜೀವನವನ್ನು ಮರೆಯಾಗಿಸಿತು. ತಮ್ಮ ವೃತ್ತಿ ಜೀವನ ಹೇಗೆ ದುರಂತ ಕಂಡಿತು ಎನ್ನುವ ಬಗ್ಗೆ ಮೊದಲ ಬಾರಿಗೆ ಬಹಿರಂಗಗೊಳಿಸಿದ್ದಾರೆ. 
ವಿವೇಕ್ ಮತ್ತು ಸಲ್ಮಾನ್ ಅವರ ಪೈಪೋಟಿಗೆ ಕಾರಣ ಐಶ್ವರ್ಯ ರೈ ಬಚ್ಚನ್. ಸಲ್ಮಾನ್ ಮಾಜಿ ಗೆಳೆಯ, ಸಲ್ಮಾನ್ ನಂತರ ವಿವೇಕ್ ಅವರಂದಿಗೆ ಐಶ್ವರ್ಯ ಅಫೇರ್ ಆರಂಭವಾಗಿತ್ತು. ವಿವೇಕ್ "ಕಂಪೆನಿ' ಯಂತಹ ಹಿಟ್ ಚಿತ್ರ ನೀಡಿದರೂ ತದನಂತರ "ಸಾಥಿಯಾ" ಯಶಸ್ವಿ ಚಿತ್ರವಾಗಿದ್ದರೂ ಅವಕಾಶಗಳು ಅರಸಿ ಬರಲಿಲ್ಲ. ಅದಕ್ಕೆ ಕಾರಣ ಸಲ್ಮಾನ್ ಖಾನ್‌ನೊಂದಿಗಿನ ವಿರಸ. 
 
ಮುಂಬೈ ಮಿರರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ವಿವೇಕ್, ಸಲ್ಮಾನ್‌ಖಾನ್‌ನೊಂದಿಗಿನ ವಿರಸ ನನ್ನ ಪಾಲಿಗೆ ಫತ್ವಾ ಜಾರಿಗೊಳಿಸಿದಂತಿತ್ತು. ಹಿಟ್ ಚಿತ್ರಗಳನ್ನು ನೀಡಿದರೂ ನನಗೆ ಅವಕಾಶಗಳು ಹುಡುಕಿ ಬರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. 
 
ನನ್ನ ವೈಯಕ್ತಿಕ ಜೀವನವು ಗೊಂದಲದ ಗೂಡಾಗಿತ್ತು. ಶೂಟ್ಔಟ್ ಯೆಟ್ ಲೋಖಂಡವಾಲಾ ಚಿತ್ರ ಭಾರೀ ಯಶಸ್ಸನ್ನು ಕಂಡಿತು, ಆದರೆ, ನಾನು ಅವಕಾಶವಿಲ್ಲದೇ ಒಂದು ವರ್ಷ ಮನೆಯಲ್ಲಿಯೇ ಕುಳಿತುಕೊಂಡೆ. ಸಲ್ಮಾನ್ ಖಾನ್ ಎಲ್ಲ ಚತ್ರ ನಿರ್ಮಾಪಕರಿಗೆ ಕರೆ ಮಾಡಿ ಅವಕಾಶ ನೀಡದಂತೆ ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ.
 
ರಣಬೀರ್ ಕಪೂರ್ ಮತ್ತು ಜಾನ್ ಅಬ್ರಹಾಂ ಕೂಡ ಸಲ್ಮಾನ್ ಜೊತೆ ಕೆಟ್ಟ ಸಂಬಂಧ ಹೊಂದಿದ್ದರು. ಆದಾಗ್ಯೂ ಅವರು ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. 
 
ಸಲ್ಮಾನ್‌ಖಾನ್ ಯಾವ ರೀತಿ ಸೇಡು ತೀರಿಸಿಕೊಂಡರೆಂದರೆ ಯಾರಿಗೂ ನನ್ನ ಜೊತೆ ಕೆಲಸ ಮಾಡದಂತೆ ಬೆದರಿಕೆ ಹಾಕಿದ್ದರು. ಆದರೆ, ರಣಬೀರ್ ಕಪೂರ್ ಮತ್ತು ಜಾನ್ ಅಬ್ರಾಹಂರೊಂದಿಗೆ ಸಲ್ಮಾನ್‌ಗೆ ವಿರಸವಿದ್ದರೂ ಅಂತಹ ಸೇಡು ತೀರಿಸಿಕೊಳ್ಳಲಿಲ್ಲ ಎಂದರು.
 
ಮಾಜಿ ಗೆಳತಿ ಐಶ್ವರ್ಯ ಬಚ್ಚನ್‌ರೊಂದಿಗೆ ಅಫೇರ್ ಹೊಂದಿದ್ದಕ್ಕಾಗಿ ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ನನಗೆ ಬೆದರಿಕೆಯೊಡ್ಡಿದ್ದರು ಎಂದು ವಿವೇಕ್ ಓಬೆರಾಯ್ ಹಿಂದೆ ಆರೋಪಿಸಿದ್ದರು.
 
ಏತನ್ಮಧ್ಯೆ, ವಿವೇಕ್ ಓಬೆರಾಯ್ ಮತ್ತು ಐಶ್ವರ್ಯ ರೈ ಬಚ್ಚನ್ ಸಂತೋಷದ ವೈವಾಹಿಕ ಜೀವನ ಮುಂದುವರಿಸಿದ್ದಾರೆ. ಸಲ್ಮಾನ್ ಖಾನ್ ಇನ್ನೂ ಬ್ಯಾಚುಲರ್‌ ಜೀವನ ಸಾಗಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಪುತ್ರ ಯತೀಂದ್ರಗೆ 500 ರೂ. ದಂಡ ವಿಧಿಸಿದ ಪೊಲೀಸರು