Publish Date: Tue, 19 Sep 2017 (08:47 IST)
Updated Date: Tue, 19 Sep 2017 (08:49 IST)
ಚೆನ್ನೈ: ಕ್ರಿಕೆಟಿಗ ಧೋನಿ ಮಾಜಿ ಪ್ರೇಯಸಿ ಎನ್ನಲಾದ ನಟಿ ಲಕ್ಷ್ಮೀ ರೈ ಇತ್ತೀಚೆಗಷ್ಟೇ ತಮ್ಮ ನಡುವಿನ ಸಂಬಂಧ ಎಂತಹದ್ದಾಗಿತ್ತು ಎಂದು ಬಾಯ್ಬಿಟ್ಟಿದ್ದರು. ಆದರೆ ಪದೇ ಪದೇ ಪತ್ರಕರ್ತರು ಕೇಳಿದ ಪ್ರಶ್ನೆಯಿಂದ ಉರಿದುಬಿದ್ದ ಲಕ್ಷ್ಮೀ ಧೋನಿ ಎಂದರೆ ಯಾರು ಎಂದು ತಿರುಗಿ ಪ್ರಶ್ನಿಸಿದ್ದಾರೆ.
ನಮ್ಮ ನಡುವೆ ಸ್ನೇಹವಿತ್ತು ನಿಜ. ಆದರೆ ಅದು ಸರಿ ಬರಲಿಲ್ಲ. ಹೀಗಾಗಿ ನಾವು ಬೇರೆಯಾಗಲು ತೀರ್ಮಾನಿಸಿದೆವು ಎಂದು ಲಕ್ಷ್ಮೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಮತ್ತೆ ವಾಹಿನಿಯೊಂದು ಅವರ ಬಳಿ ಧೋನಿ ಬಗ್ಗೆ ಕೇಳಿದಾಗ ಸಿಟ್ಟಿಗೆದ್ದ ಲಕ್ಷ್ಮೀ ‘ಧೋನಿ ಎಂದರೆ ಯಾರು?’ ಎಂದು ಪ್ರಶ್ನಿಸಿದ್ದಾರೆ.
‘ನಾವಿಬ್ಬರೂ ಸ್ನೇಹದಿಂದ ಇದ್ದಿದ್ದು ನಿಜ, ಆದರೆ ಅದೆಲ್ಲಾ ಈಗ ಮುಗಿದು ಹೋದ ಕತೆ. ಈಗ ಆತನಿಗೆ ಮದುವೆಯಾಗಿದೆ. ಮಗುವಿದೆ. ಆತನ ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿದ್ದಾನೆ. ಈಗಲೂ ಜನ ಯಾಕೆ ನನ್ನನ್ನು ಆ ಬಗ್ಗೆ ಪ್ರಶ್ನಿಸುತ್ತಾರೆ? ನನಗೆ ಈ ಬಗ್ಗೆ ಹೆಚ್ಚು ಮಾತನಾಡಲು ಇಷ್ಟವಿಲ್ಲ. ಯಾಕೆಂದರೆ ಅದು ಮುಗಿದು ಹೋದ ಕತೆ. ಮಾತ್ರವಲ್ಲ, ನಾನು ಧೋನಿಯನ್ನು ತುಂಬಾ ಗೌರವಿಸುತ್ತೇನೆ’ ಎಂದು ಲಕ್ಷ್ಮೀ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ