Select Your Language

Notifications

webdunia
webdunia
webdunia
webdunia

ಮತ್ತೆ ತಪ್ಪು ಮಾಡಿದರೇ ನಾಯಕ ಕೊಹ್ಲಿ?

ಮತ್ತೆ ತಪ್ಪು ಮಾಡಿದರೇ ನಾಯಕ ಕೊಹ್ಲಿ?
ಚೆನ್ನೈ , ಸೋಮವಾರ, 18 ಸೆಪ್ಟಂಬರ್ 2017 (08:35 IST)
ಚೆನ್ನೈ: ಪ್ರಯೋಗ ಮಾಡುವ ಭರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆಯೇ? ನಿನ್ನೆಯ ಪಂದ್ಯ ನೋಡಿದರೆ ಮತ್ತೆ ಅದು ಸರಿ ಎನಿಸುತ್ತದೆ.

 
ಕೆಎಲ್ ರಾಹುಲ್ ರನ್ನು ಹೊರಗಿಟ್ಟು ಅಜಿಂಕ್ಯಾ ರೆಹಾನೆಗೆ ಆರಂಭಿಕ ಸ್ಥಾನ ನೀಡಿದ್ದು ಸರಿಯೇ ಎನ್ನುವ ಚರ್ಚೆ ಶುರುವಾಗಿದೆ. ಅತ್ತ ಮನೀಶ್ ಪಾಂಡೆ ಕೂಡಾ ಉತ್ತಮ ಆಟವಾಡಲಿಲ್ಲ. ಹಾಗಾಗಿ ಕೊಹ್ಲಿ ಯೋಜನೆಗಳ ಬಗ್ಗೆ ಪ್ರಶ್ನೆ ಮೂಡಿಸಿದೆ.

ಕೆಎಲ್ ರಾಹುಲ್ ಆರಂಭಿಕರಾಗಿ ಉತ್ತಮ ಸಾಧನೆ ಮಾಡಿದವರು. ಅವರನ್ನು ಪ್ರಯೋಗದ ಹೆಸರಲ್ಲಿ ಕೆಲವು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ವಿಫಲರಾದಾಗ ಆಡುವ ಬಳಗದಿಂದಲೇ ಹೊರಗಿಟ್ಟಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ರೆಹಾನೆ ಬದಲಿಗೆ ರಾಹುಲ್ ರನ್ನು ಆರಂಭಿಕ ಸ್ಥಾನದಲ್ಲಿ ಆಡಿಸಿದ್ದರೆ ಭಾರತಕ್ಕೆ ಉತ್ತಮ ಆರಂಭ ದೊರಕುತ್ತಿತ್ತು. ಆದರೆ ಕೊಹ್ಲಿ ರಾಹುಲ್ ರಂತಹ ಸ್ಪೆಷಲಿಸ್ಟ್ ಆರಂಭಿಕರಿದ್ದೂ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಇನ್ನೊಬ್ಬರನ್ನು ಕೂರಿಸಲು ಸರ್ಕಸ್ ಮಾಡುತ್ತಿರುವುದೇಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಪ್ರಯೋಗದ ಹೆಸರಿನಲ್ಲಿ ರಾಹುಲ್ ಭವಿಷ್ಯ ಮಂಕಾಗದಿರಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಗೆಲ್ಲಲು 282 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ