Publish Date: Sun, 17 Sep 2017 (18:14 IST)
Updated Date: Sun, 17 Sep 2017 (18:24 IST)
ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿದೆ.
ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಎದುರಾಳಿ ತಂಡ ಆಸ್ಟ್ರೇಲಿಯಾಗೆ ಗೆಲ್ಲಲು 282 ರನ್ ಗಳ ಗುರಿ ನೀಡಿದೆ. ಎಂ.ಎಸ್.ಧೋನಿ 79, ಹಾರ್ದಿಕ್ 83, ಕೇದಾರ್ ಜಾಧವ್ 40, ರೋಹಿತ್ ಶರ್ಮಾ 28, ಭುವನೇಶ್ವರ್ ಕುಮಾರ್ ಔಟಾಗದೆ 32 ರನ್ ಗಳಿಸಿದ್ದಾರೆ.
ಇನ್ನು ನೇಥನ್ ಕೌಲ್ಟರ್ ನೈಲ್ 3, ಸ್ಟೊಯಿನಿಸ್ 2, ಆ್ಯಡಮ್ ಜಂಪಾ ಮತ್ತು ಜೇಮ್ಸ್ ಫಾಕ್ನರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.