Publish Date: Sun, 17 Sep 2017 (08:30 IST)
Updated Date: Sun, 17 Sep 2017 (08:33 IST)
ಚೆನ್ನೈ: ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೌಂಟಿ ಕ್ರಿಕೆಟ್ ಆಡಲೆಂದು ಟೀಂ ಇಂಡಿಯಾದ ಆಸ್ಟ್ರೇಲಿಯಾ ಸರಣಿ ಬಿಟ್ಟು ದೂರದ ಲಂಡನ್ ನಲ್ಲಿ ಕುಳಿತಿದ್ದಾರೆ. ಆದರೆ ಇದೀಗ ಅವರ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.
ಆದರೆ ಅದಕ್ಕೆ ಕಾರಣ ಅವರು ಆಸೀಸ್ ಸರಣಿ ತಪ್ಪಿಸಿಕೊಂಡಿರುವುದಲ್ಲ. ಬದಲಿಗೆ ಟ್ವಿಟರ್ ನಲ್ಲಿ ಚೀನಾ ನಿರ್ಮಿತ ಫೋನ್ ಒಂದರ ಜಾಹೀರಾತು ಪ್ರಮೋಟ್ ಮಾಡಿರುವುದು.
ಜಿನ್ ಪೆ ಐಫೋನ್ ನ್ನು ಹೊಗಳಿ ಬರೆದ ಅಶ್ವಿನ್ ಮೇಲೆ ಅಭಿಮಾನಿಗಳು ಇನ್ನಿಲ್ಲದಂತೆ ಮುಗಿಬಿದ್ದಿದ್ದಾರೆ. ಇತ್ತೀಚೆಗಷ್ಟೇ ಚೀನಾ-ಭಾರತ ನಡುವೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಭಾರತದಲ್ಲಿ ಚೀನಾ ವಸ್ತುಗಳ ವಿರುದ್ಧ ಅಭಿಯಾನವೇ ಆರಂಭವಾಗಿತ್ತು. ಹೀಗಿರುವಾಗ ಅಶ್ವಿನ್ ಚೀನಾ ಸ್ಮಾರ್ಟ್ ಫೋನ್ ನ್ನು ಬೆಸ್ಟ್ ಎಂದಿದ್ದು ಅಭಿಮಾನಿಗಳನ್ನು ಕೆರಳಿಸಿದೆ.
ನಿಮ್ಮ ಕೊನೆಯ ಬೆಸ್ಟ್ ಪರ್ಫಾರ್ಮೆನ್ಸ್ ಎಂದರೆ ಮೂವ್ ಜಾಹೀರಾತಿನಲ್ಲಿ ಎಂದು ಒಬ್ಬರು ಕಾಲೆಳೆದಿದ್ದರೆ, ಇನ್ನೊಬ್ಬ ಮತ್ತೆ ಇಂತಹ ಜಾಹೀರಾತು ಹಾಕಬೇಡಿ. ನಿಮ್ಮನ್ನು ಅನ್ ಫಾಲೋ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.