Select Your Language

Notifications

webdunia
webdunia
webdunia
webdunia

ಕೊಹ್ಲಿ ಎಂದರೆ ಯಾರು? ಎಂದು ಕೇಳಿದ್ದಕ್ಕೆ ಆಕೆಗೆ ಸಿಕ್ಕ ಉತ್ತರ ನೋಡಿ!

ಕೊಹ್ಲಿ ಎಂದರೆ ಯಾರು? ಎಂದು ಕೇಳಿದ್ದಕ್ಕೆ ಆಕೆಗೆ ಸಿಕ್ಕ ಉತ್ತರ ನೋಡಿ!
ಕರಾಚಿ , ಸೋಮವಾರ, 11 ಸೆಪ್ಟಂಬರ್ 2017 (08:12 IST)
ಕರಾಚಿ: ವಿರಾಟ್ ಕೊಹ್ಲಿ ಎಂಬ ಹೆಸರು ಕೇಳದವರು ಯಾರಿದ್ದಾರೆ? ಹಾಗಂತ ನಾವಂದುಕೊಂಡಿದ್ದರೆ ತಪ್ಪು. ಪಾಕಿಸ್ತಾನದ ಯುವತಿಯೊಬ್ಬರು ಕೊಹ್ಲಿ ಯಾರು ಎಂದು ಕೇಳಿದ್ದಾಳೆ.

 
ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ತಮಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕ್ರಿಕೆಟ್ ಕಲಿಸಿದ ಎಲ್ಲಾ ಗುರುಗಳಿಗೆ ವಂದನೆ ಸಲ್ಲಿಸಿದ್ದರು. ಇದರಲ್ಲಿ ಪಾಕ್ ಕ್ರಿಕೆಟಿಗರ ಹೆಸರೂ ಇತ್ತು. ಅದನ್ನು ನೋಡಿ ಅದೆಷ್ಟೋ ಪಾಕ್ ಅಭಿಮಾನಿಗಳು ಕೊಹ್ಲಿಗೆ ಧನ್ಯವಾದ ಸಲ್ಲಿಸಿದ್ದರು.

ಆದರೆ ಯುವತಿಯೊಬ್ಬಳು ‘ದಯವಿಟ್ಟು ಯಾರಾದರೂ ಹೇಳಿ? ಯಾರು ಈ ಜಂಟಲ್ ಮ್ಯಾನ್?’ ಎಂದು ಪ್ರಶ್ನಿಸಿದ್ದಳು. ಅದಕ್ಕೆ ಉತ್ತರಿಸಿದ ಇನ್ನೊಬ್ಬ ಪಾಕ್ ನಾಗರಿಕ  ಭಾರತೀಯರು ಹೆಮ್ಮೆ ಪಡುವಂತೆ ವಿವರಿಸಿದ್ದಾನೆ.

‘ಕೊಹ್ಲಿ ಎಂದರೆ ಪ್ರಸಕ್ತ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ. ವಿಶ್ವದ ದಿಗ್ಗಜ ಬ್ಯಾಟ್ಸ್ ಮನ್. ಸದ್ಯಕ್ಕೆ ಉಳಿದೆಲ್ಲಾ ಕ್ರಿಕೆಟಿಗರ ಹೆಸರು ಈತನ ನಂತರ ಬರುತ್ತದೆ’ ಎಂದು ಆ ಅಭಿಮಾನಿ ಉತ್ತರಿಸಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಅಶ್ವಿನ್, ಜಡೇಜಾಗೆ ಮತ್ತೆ ರೆಸ್ಟ್