Publish Date: Sat, 09 Sep 2017 (08:24 IST)
Updated Date: Sat, 09 Sep 2017 (08:26 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶಿಕ್ಷಕರ ದಿನಾಚರಣೆ ದಿನ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಾಕಿದ ಫೋಟೋವೊಂದು ಪಾಕ್ ಅಭಿಮಾನಿಗಳೂ ಅವರನ್ನು ಇಷ್ಟಪಡುವಂತೆ ಮಾಡಿದೆ.
ಶಿಕ್ಷಕರ ದಿನಾಚರಣೆ ದಿನ ಕೊಹ್ಲಿ ತಮಗೆ ಸ್ಪೂರ್ತಿಯಾದ ಜಾಗತಿಕ ಕ್ರಿಕೆಟ್ ದಿಗ್ಗಜರ ಹೆಸರಿನ ವಾಲ್ ಎದುರು ಕೂತ ಫೋಟೋ ಹಾಕಿದ್ದರು. ಇದರಲ್ಲಿ ಪಾಕ್ ನ ಮಾಜಿ ಕ್ರಿಕೆಟಿಗರಾದ ಜಾವೇದ್ ಮಿಯಾಂದಾದ್, ಇಮ್ರಾನ್ ಖಾನ್ ಹೆಸರೂ ಇತ್ತು.
ಇದನ್ನು ನೋಡಿ ಪಾಕ್ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿಗೆ ಅಭಿನಂದಿಸಿದ್ದಾರೆ. ಇದು ನಿಜಕ್ಕೂ ಶ್ರೇಷ್ಠ ನಡೆ ಎಂದು ಕೊಂಡಾಡಿರುವ ಟ್ವಿಟರಿಗರು, ಭಾರತದ ನಾಯಕ ನಿಜಕ್ಕೂ ಶ್ರೇಷ್ಠ ಎಂದು ಹೊಗಳಿದ್ದಾರೆ.