Publish Date: Fri, 08 Sep 2017 (10:33 IST)
Updated Date: Fri, 08 Sep 2017 (10:35 IST)
ನವದೆಹಲಿ: ವಿರಾಟ್ ಕೊಹ್ಲಿ ಎಂದರೆ ಜಾಗತಿಕ ಕ್ರಿಕೆಟ್ ಗುರುತಿಸಿಕೊಂಡ ಪ್ರತಿಭೆ. ಆದರೆ ಅವರ ತವರು ಕ್ರಿಕೆಟ್ ಸಂಸ್ಥೆಯೇ ಕೊಹ್ಲಿಯನ್ನು ಕಡೆಗಣಿಸಿದೆ ಎಂದರೆ ನೀವು ನಂಬಲೇ ಬೇಕು.
ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕೆಲವು ಕ್ರಿಕೆಟರುಗಳ ಫೋಟೋ ಗೌರವಾರ್ಥವಾಗಿ ಹಾಕಲಾಗಿದೆ. ಆದರೆ ಇದೇ ಕ್ರಿಕೆಟ್ ಸಂಸ್ಥೆಯಿಂದ ಹೊರಹೊಮ್ಮಿದ ಜಾಗತಿಕ ಪ್ರತಿಭೆ ಕೊಹ್ಲಿ ಫೋಟೋವೇ ಇಲ್ಲ.
ಕೋಟ್ಲಾ ಮೈದಾನದಲ್ಲಿ ಹಿರಿಯ ಕ್ರಿಕೆಟಿಗರಿಗೆ ಗೌರವವೇ ಇಲ್ಲ ಎಂದು ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ದೂರಿದ್ದಾರೆ. ಸಾಮಾನ್ಯವಾಗಿ ಒಂದು ಕ್ರಿಕೆಟ್ ಮೈದಾನದಲ್ಲಿ ಆಯಾ ಕ್ರಿಕೆಟ್ ಸಂಸ್ಥೆಯಿಂದ ಹೊರಬಂದ ಸಾಧಕ ಕ್ರಿಕೆಟಿಗರ ಹೆಸರು, ಅಥವಾ ಫೋಟೋ ಹಾಕಿ ಗೌರವ ಸೂಚಿಸುತ್ತಾರೆ. ಆದರೆ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಆ ಕನಿಷ್ಠ ಗೌರವವೂ ಇಲ್ಲ ಎಂದು ಅಮರನಾಥ್ ಆಕ್ಷೇಪಿಸಿದ್ದಾರೆ.