Select Your Language

Notifications

webdunia
webdunia
webdunia
webdunia

ಲಂಕಾ ಪ್ರವಾಸದಲ್ಲಿ ಒಂಭತ್ತಕ್ಕೆ ಒಂಭತ್ತು ಹೊಡೆದ ಟೀಂ ಇಂಡಿಯಾ

webdunia
ಗುರುವಾರ, 7 ಸೆಪ್ಟಂಬರ್ 2017 (08:42 IST)
ಕೊಲೊಂಬೊ: ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ಏಕಮಾತ್ರ ಟಿ20 ಪಂದ್ಯವನ್ನೂ ಭಾರತ 7 ವಿಕೆಟ್ ಗಳಿಂದ ಗೆದ್ದು ಸೋಲೇ ಇಲ್ಲದ ಸರದಾರನಾಗಿ ದ್ವೀಪ ರಾಷ್ಟ್ರ ಪ್ರವಾಸ ಮುಗಿಸಿದೆ.

 
ಇದೇ ಮೊದಲ ಬಾರಿಗೆ ಭಾರತ ತಂಡ ವಿದೇಶ ಪ್ರವಾಸದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ.

ಮಳೆಯಿಂದಾಗಿ ಪಂದ್ಯ  ಸ್ವಲ್ಪ ತಡವಾದರೂ ಸಂಪೂರ್ಣ 20 ಓವರ್ ಗಳ ಆಟ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಭಾರತಕ್ಕೆ 171 ರನ್ ಗಳ ಗುರಿ ನೀಡಿತು. ಆದರೆ ಈ ಮೊತ್ತವನ್ನು ಬೆಂಬತ್ತುವಾಗ ಭಾರತ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ರನ್ನು ಬಹುಬೇಗನೇ ಕಳೆದುಕೊಂಡಿತು.

ನಂತರ ಜತೆಯಾದ ವಿರಾಟ್ ಕೊಹ್ಲಿ-ಮನೀಶ್ ಪಾಂಡೆ ಜೋಡಿ ಭಾರತವನ್ನು ಗೆಲುವಿನ ಸಮೀಪ ತಂದು ನಿಲ್ಲಿಸಿತು. ಈ ಸಂದರ್ಭದಲ್ಲಿ 54 ಬಾಲ್ ಗಳಲ್ಲಿ 82 ರನ್ ಸಿಡಿಸಿದ್ದ ಕೊಹ್ಲಿ ಔಟಾದರು. ಆದರೆ ಮನೀಶ್ ವಿಕೆಟ್ ಕಳೆದುಕೊಳ್ಳದೇ ಕೊನೆಯವರೆಗೂ ಅಜೇಯವಾಗಿ 36 ಬಾಲ್ ಗಳಲ್ಲಿ 51 ರನ್ ಗಳಿಸಿದರು. ಮನೀಶ್ ಅರ್ಧಶತಕ ಗಳಿಸಲು ಅವಕಾಶ ಮಾಡಿಕೊಡಲು ಧೋನಿ ತಾವು ಗೆಲುವಿನ ರನ್ ಗಳಿಸದೇ ಬಿಟ್ಟುಕೊಟ್ಟರು. ಇದರೊಂದಿಗೆ ಭಾರತ ಲಂಕಾದಲ್ಲಿ ಆಡಿದ ಎಲ್ಲಾ 9 ಪಂದ್ಯಗಳನ್ನು ಗೆದ್ದಂತಾಗಿದೆ.

ಇದನ್ನೂ ಓದಿ.. ಕ್ರಿಕೆಟ್ ಕಡೆಗೆ ಗಮನ ಕೊಡಪ್ಪಾ.. ಹುಡ್ಗೀರ ಕಡೆಗಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia Hindi

ಮುಂದಿನ ಸುದ್ದಿ

ಕ್ರಿಕೆಟ್ ಕಡೆಗೆ ಗಮನ ಕೊಡಪ್ಪಾ.. ಹುಡ್ಗೀರ ಕಡೆಗಲ್ಲ!