Publish Date: Wed, 06 Sep 2017 (09:19 IST)
Updated Date: Wed, 06 Sep 2017 (09:21 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್, ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಇಂದು ಟಿ20 ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಆದರೆ ಕೆಎಲ್ ರಾಹುಲ್ ಗೆ ಇನ್ನೂ ತಮ್ಮ ಮೆಚ್ಚಿನ ಸ್ಥಾನ ಸಿಗದು.
ಶಿಖರ್ ಧವನ್ ತಾಯಿಗೆ ಅನಾರೋಗ್ಯವಾಗಿರುವ ಹಿನ್ನಲೆಯಲ್ಲಿ ತವರಿಗೆ ಮರಳಿದ್ದಾರೆ. ಅವರ ಅನುಪಸ್ಥಿತಿಯಲ್ಲಾದರೂ ರಾಹುಲ್ ಗೆ ಆರಂಭಿಕ ಸ್ಥಾನ ಸಿಗಬಹುದೇನೋ ಎಂಬ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿದೆ.
ಧವನ್ ಬದಲಿಗೆ ರಾಹುಲ್ ಆರಂಭಿಕರಾಗುವ ಬದಲು ವಿರಾಟ್ ಕೊಹ್ಲಿಯೇ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ರಾಹುಲ್ ಅನಿವಾರ್ಯವಾಗಿ ಮನೀಶ್ ಪಾಂಡೆ, ಧೋನಿ, ಕೇದಾರ್ ಜಾದವ್ ಜತೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬೇಕಾಗಿದೆ. ರೆಹಾನೆಯನ್ನು ಮತ್ತೆ ಆಡಿಸದೇ 5 ತಜ್ಞರ ಬೌಲರ್ ಗಳಿಗೆ ಅವಕಾಶ ನೀಡುವ ಯೋಜನೆ ಕೊಹ್ಲಿಗಿರಬಹುದು.