Publish Date: Sun, 03 Sep 2017 (08:26 IST)
Updated Date: Sun, 03 Sep 2017 (08:28 IST)
ಕೊಲೊಂಬೊ: ಟೀಂ ಇಂಡಿಯಾದಲ್ಲಿ ಯಾರ ಮಾತು ನಡೆಯೋದು? ಕೋಚ್ ಹೇಳಿದ್ದಾ? ನಾಯಕನದ್ದಾ? ಅದಕ್ಕೆ ಕೋಚ್ ರವಿಶಾಸ್ತ್ರಿ ಉತ್ತರ ನೀಡಿದ್ದಾರೆ.
ಅನಿಲ್ ಕುಂಬ್ಳೆ ಮತ್ತು ಕೊಹ್ಲಿ ನಡುವೆ ನಾಯಕತ್ವಕ್ಕಾಗಿ ಕಿತ್ತಾಟ ನಡೆದು ಕೋಚ್ ಸ್ಥಾನಕ್ಕೆ ಕುಂಬ್ಳೆ ರಾಜೀನಾಮೆ ಹೊರ ನಡೆದ ಪ್ರಸಂಗದ ನಂತರ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಬಾಸ್ ಯಾವತ್ತಿದ್ರೂ ನಾಯಕನೇ ಎಂದಿದ್ದಾರೆ.
‘ತಂಡದ ಬಾಸ್ ಯಾವತ್ತಿದ್ರೂ ಕೊಹ್ಲಿ. ನಾನು ಮತ್ತು ನನ್ನ ಸಹಾಯಕ ಸಿಬ್ಬಂದಿಗೆ ತಂಡದ ಆಟಗಾರರು ಆರಾಮವಾಗಿರುವಂತೆ ನೋಡಿಕೊಳ್ಳುವುದಷ್ಟೇ ಕೆಲಸ. ಸಹಾಯಕ ಸಿಬ್ಬಂದಿಗಳು ಮತ್ತು ಆಟಗಾರರ ನಡುವಿನ ಸಾಮರಸ್ಯದ ಫಲವೇ ನೀವೀಗ ಮೈದಾನದಲ್ಲಿ ಕಾಣುತ್ತಿರುವ ಯಶಸ್ಸು’ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.