Publish Date: Fri, 08 Sep 2017 (10:20 IST)
Updated Date: Fri, 08 Sep 2017 (10:22 IST)
ನವದೆಹಲಿ: ಎದೆ ಕಾಣುವಂತಹ ಗ್ಲಾಮರಸ್ ಉಡುಗೆಯ ಫೋಟೋ ಹಾಕಿದ್ದ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬ ಟೀಕಿಸಿದ ಬೆನ್ನಲ್ಲೇ ಮಿಥಾಲಿ ರಾಜ್ ಮತ್ತೊಂದು ಫೋಟೋ ಹಾಕಿದ್ದಾರೆ.
ನಿಮ್ಮನ್ನು ಜನ ಮಾದರಿ ಹೆಣ್ಣೆಂದು ಗೌರವಿಸುತ್ತಾರೆ. ದಯವಿಟ್ಟು ಇಂತಹ ಫೋಟೋ ಹಾಕಬೇಡಿ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದ. ಇದಕ್ಕೆ ನಿನ್ನೆ ಸುಮ್ಮನಿದ್ದ ಮಿಥಾಲಿ ಇಂದು ಮತ್ತೊಂದು ಫೋಟೋ ಮೂಲಕ ತಣ್ಣನೆ ಪ್ರತಿಕ್ರಿಯೆ ನೀಡಿದ್ದಾರೆ.
ಮಿಥಾಲಿ ರಾಜ್ ತಾವು ಬಾಲ್ಯದಲ್ಲಿ ತೆಗೆದಿದ್ದ ಫೋಟೋವೊಂದನ್ನು ಪ್ರಕಟಿಸಿದ್ದು, ‘ಒಂದು ಫೋಓ ಸಾವಿರ ನೆನಪುಗಳನ್ನು ತರಿಸುತ್ತದೆ’ ಎಂದು ಸಂದೇಶ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಮೈ ತುಂಬಾ ಉಡುಪು ಧರಿಸಿದ್ದಲ್ಲದೆ, ಆಭರಣವನ್ನೂ ಹಾಕಿಕೊಂಡಿದ್ದಾರೆ. ಆದರೆ ಅಭಿಮಾನಿಗೆ ಮಾತ್ರ ಈಗಲೂ ಹಲವು ಮಂದಿ ಉಡುಪು ಬಗ್ಗೆ ಅಂತಹ ತಗಾದೆ ತೆಗೆದಿದ್ದಕ್ಕೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.