Publish Date: Thu, 24 Aug 2017 (10:45 IST)
Updated Date: Thu, 24 Aug 2017 (10:47 IST)
ಬೆಂಗಳೂರು: ಯಾವುದೇ ರೀತಿಯ ಪಾತ್ರ ಕೊಟ್ಟರೂ ಅಭಿನಯಿಸಬಲ್ಲ ಕಲಾವಿದ ಎನ್ನುವ ಕಾರಣಕ್ಕೇ ಜಗ್ಗೇಶ್ ಗೆ ನವರಸನಾಯಕ ಎಂಬ ಬಿರುದು ಸಿಕ್ಕಿದೆ. ಇಂತಿಪ್ಪ ಜಗ್ಗೇಶ್ ಎಷ್ಟು ಭಾಷೆ ಬಲ್ಲರು ಗೊತ್ತಾ?
ಹೀಗಂತ ಅಭಿಮಾನಿಯೊಬ್ಬರು ಜಗ್ಗೇಶ್ ಗೆ ಟ್ವಿಟರ್ ನಲ್ಲಿ ಪ್ರಶ್ನೆ ಹಾಕಿದ್ದರು. ಅದಕ್ಕೆ ಉತ್ತರಿಸಿದ ಜಗ್ಗೇಶ್ ತನಗೆ 6 ಭಾಷೆ ಗೊತ್ತು ಎಂದಿದ್ದಾರೆ.
ಆದರೆ ಭಾಷೆ ಗೊತ್ತು ಎನ್ನುವ ಮಾತ್ರಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕನ್ನಡ ಗೊತ್ತು. ಆದರೆ ಬೇರೆ ಭಾಷೆಯ ಚಿತ್ರದಲ್ಲಿ ನಟಿಸಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಎಂದು ಮಾತೃಭಾಷೆ ಪ್ರೇಮ ತೋರಿದ್ದಾರೆ. ಅಷ್ಟೇಕೆ? ಜಗ್ಗೇಶ್ ಟ್ವಿಟರ್ ಪೇಜ್ ನಲ್ಲೂ ಆದಷ್ಟು ಕನ್ನಡದಲ್ಲೇ ಸಂವಹನ ನಡೆಸುತ್ತಾರೆ.