Publish Date: Sat, 02 Sep 2017 (08:24 IST)
Updated Date: Sat, 02 Sep 2017 (08:26 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟರು. ಅಭಿಮಾನಿಗಳೊಂದಿಗೆ ಹೆಚ್ಚಾಗಿ ಟ್ವಿಟರ್ ನಲ್ಲಿ ಬೆರೆಯುವ ಇವರು ಪರಸ್ಪರ ಕುತೂಹಲಕಾರಿ ಸಂಭಾಷಣೆ ಮಾಡಿದ್ದಾರೆ.
ಅದಕ್ಕೆ ಮೊದಲು ಓಂಕಾರ ಹಾಕಿದ್ದು ಜಗ್ಗೇಶ್. ಜಗ್ಗೇಶ್ ಯಾವತ್ತೂ ಕನ್ನಡದಲ್ಲೇ ನಡೆಸುವ ಸಂಭಾಷಣೆ ನಡೆಸುತ್ತಾರೆ. ಈ ಬಾರಿಯೂ ಕಿಚ್ಚನ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭ ಸಂದೇಶ ನೀಡಿದ್ದರು. ಈ ಬಗ್ಗೆ ಸುದೀಪ್ ಟ್ವಿಟರ್ ಸಂದೇಶದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ನಿನ್ನ ಬರಹಗಳು, ಕನ್ನಡದ ಮೇಲಿನ ಹಿಡಿತ ಎಲ್ಲವೂ ನನಗೆ ಅಚ್ಚರಿ ಉಂಟು ಮಾಡುತ್ತದೆ. ನಿಮ್ಮ ಹಾಗೆ ನಾನೂ ಮಾತಾಡಬೇಕೆನಿಸುತ್ತದೆ’ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ‘ನೀನು ನಿಜವಾದ ಕನ್ನಡಿಗ. ಪರಭಾಷಿಕರು ಇಂದು ನಿನ್ನಿಂದ ಕನ್ನಡದ ಕಡೆಗೆ ತಿರುಗಿ ನೋಡಿದ ಹಾಗೆ ಮಾಡಿತಾದ ನೀನು. ಅಕ್ಷರಕ್ಕಿಂತ ನಿನ್ನ ಆಚರಣೆ ಶ್ರೇಷ್ಠ’ ಎಂದಿದ್ದಾರೆ.
ಹೀಗೆ ಸ್ಟಾರ್ ನಟರಿಬ್ಬರು ಪರಸ್ಪರ ಕನ್ನಡ ಪ್ರೀತಿಯನ್ನು ಹೊರಹಾಕಿರುವುದನ್ನು ನೋಡಿ ಅಭಿಮಾನಿಗಳೂ ಖುಷ್ ಆಗಿದ್ದಾರೆ.