Publish Date: Thu, 31 Aug 2017 (09:12 IST)
Updated Date: Thu, 31 Aug 2017 (09:15 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗೆ ತುಂಬಾ ಕೋಪ ಬಂದಿದೆ. ಅದಕ್ಕೆ ಕಾರಣ ತಮ್ಮ ಕೋಮಲ್ ಶೂಟಿಂಗ್ ಸಮಯದಲ್ಲಿ ಮಾಡಿಕೊಂಡ ಅನಾಹುತ.
ಕೆಂಪೇಗೌಡ 2 ಚಿತ್ರೀಕರಣ ಸಂದರ್ಭದಲ್ಲಿ ನಟ ಕೋಮಲ್ ಮತ್ತು ಯೋಗೀಶ್ ಸ್ಟಂಟ್ ಮಾಡಲು ಹೋಗಿ ಅಪಘಾತಕ್ಕೀಡಾಗಿದ್ದಾರೆ. ಪರಿಣಾಮ ಕೋಮಲ್ ಮತ್ತು ಯೋಗಿ ಗಾಯಗೊಂಡಿದ್ದಾರೆ.
ಘಟನೆ ತಮ್ಮ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿರುವ ಜಗ್ಗೇಶ್, ಇಷ್ಟೊಂದು ಅಪಾಯಕಾರಿ ಸಾಹಸ ಮಾಡುವಾಗ ಮುಂಜಾಗ್ರತಾ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕೆ ಹೀಗೆ ಜೀವದ ಜತೆ ಆಟವಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.
ಹಿಂದೆ ಮಾಸ್ತಿ ಗುಡಿ ಚಿತ್ರೀಕರಣದ ಸಂದರ್ಭದಲ್ಲಿ ಖಳನಟರಾದ ಉದಯ್ ಮತ್ತು ಅನಿಲ್ ಸಾವನ್ನಪ್ಪಿದಾಗಲೂ ಜಗ್ಗೇಶ್ ಎಲ್ಲರಿಗಿಂತ ಮೊದಲು ಆಕ್ರೋಶ ವ್ಯಕ್ತಪಡಿಸಿದ್ದರು.