Select Your Language

Notifications

webdunia
webdunia
webdunia
webdunia

ಎಲ್.ಎನ್. ಶಾಸ್ತ್ರೀಗೆ ನೆರವು ನೀಡಲು ಮುಂದಾದ ನಟ ಜಗ್ಗೇಶ್

ಎಲ್.ಎನ್. ಶಾಸ್ತ್ರೀಗೆ ನೆರವು ನೀಡಲು ಮುಂದಾದ ನಟ ಜಗ್ಗೇಶ್
ಬೆಂಗಳೂರು , ಶನಿವಾರ, 19 ಆಗಸ್ಟ್ 2017 (19:41 IST)
ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಾಡಲು ಆರಂಭಿಸಿದ ಖ್ಯಾತ ಹಿನ್ನೆಲೆ ಗಾಯಲ ಎಲ್.ಎನ್. ಶಾಸ್ತ್ರೀ ಇದುವರೆಗೆ 3000ಕ್ಕೂ ಅಧಿಕ ಹಾಡುಗಳನ್ನ ಹಾಡಿದ್ದಾರೆ. ಆದರೆ, ದುರ್ದೈವಿ ನೋಡಿ ಶಾಸ್ತ್ರಿಯವರು ಈಗ ಮಾರಕ ಕ್ಯಾನ್ಸರ್`ಗೆ ತುತ್ತಾಗಿದ್ದಾರೆ. ಇಷ್ಟು ವರ್ಷದಿಂದ ಚಿತ್ರರಂಗದಲ್ಲಿದ್ದರೂ ಶಾಸ್ತ್ರಿಯವರು ಆರ್ಥಿಕ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ಪರಿತಪಿಸುತ್ತಿದ್ದಾರೆ.
 

ಶಾಸ್ತ್ರೀಯವರ ಈ ದಯನೀಯ ಸ್ಥಿತಿ ಕಂಡು ಮರುಗಿದ ನವರಸ ನಾಯಕ ಜಗ್ಗೇಶ್ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಗ್ಗೇಶ್ ಈ ಮಹಾನುಭಾವ ನನ್ನ ಚಿತ್ರಗಳಿಗೆ ಹಾಡಿದ್ದಾರೆ. ಅನಾರೋಗ್ಯದ ಸುದ್ದಿ ಕೇಳಿ ಬೇಸರವಾಯಿತು. ನೆರವು ಒದಗಿಸುವ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ.

ಜನುಮದ ಜೋಡಿಯ ಕೋಲುಮಂಡೆ ಜಂಗಮದೇವ, ಮಲ್ಲ ಚಿತ್ರದ ಕರುನಾಡೆ ಸೇರಿದಂತೆ 3000ಕ್ಕೂ ಅಧಿಕ ಹಾಡುಗಳಿಗೆ ದನಿಯಾಗಿರುವ ಶಾಸ್ತ್ರೀಯವರು ಸಂಕಷ್ಟಕ್ಕೆ ಸಿಲುಕಿದ್ದು, ನೆರವಿನ ಹಸ್ತ ಚಾಚಬೇಕಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಂಜನಾಗೆ 26 ಲಕ್ಷ ರೂ. ವಂಚಿಸಿದ ಚಿಟ್ ಫಂಡ್ ಕಂಪನಿ