Select Your Language

Notifications

webdunia
webdunia
webdunia
webdunia

ಶೂಟಿಂಗ್ ವೇಳೆ ಅವಘಡ: ನಟ ಯೋಗಿ, ಕೋಮಲ್`ಗೆ ಗಾಯ

ಶೂಟಿಂಗ್ ವೇಳೆ ಅವಘಡ: ನಟ ಯೋಗಿ, ಕೋಮಲ್`ಗೆ ಗಾಯ
ಮಹಾಬಲಿಪುರಂ , ಬುಧವಾರ, 30 ಆಗಸ್ಟ್ 2017 (15:09 IST)
ಕೆಂಪೇಗೌಡ-2 ಚಿತ್ರದ ಚೇಸಿಂಗ್ ಸಾಹಸ ದೃಶ್ಯ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ನಟರಾದ ಲುಸ್ ಮಾದ ಯೋಗಿ ಮತ್ತು ಕೋಮಲ್ ಗಾಯಗೊಂಡಿದ್ಧಾರೆ.

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಕ್ವಾಡ್ ಬೈಕ್`ನಲ್ಲಿ ಯೋಗಿಯನ್ನ ಕೂರಿಸಿಕೊಂಡು ನಟ ಕೋಮಲ್ ಸಣ್ಣ ದಿಬ್ಬ ಹತ್ತಿಸಿ ಜಂಪ್ ಮಾಡಬೇಕಿತ್ತು. ಈ ಸಂದರ್ಭ ಬೈಕ್ ಸರಿಯಾಗಿ ಲ್ಯಾಂಡ್ ಆಗದೇ ಹಿಂಬದಿಗೆ ಬಿದ್ದಿದೆ. ಈ ಸಂದರ್ಭ ಬೈಕ್ ಓಡಿಸುತ್ತಿದ್ದ ಕೋಮಲ್, ಲೂಸ್ ಮಾದ ಯೋಗಿ ಗಾಯಗೊಂಡಿದ್ದಾರೆ. ಬಳಿಕ ಅವರನ್ನ ಚೆಟ್ಟಿನಾಡ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಚಿತ್ರದ ಸಾಹಸ ನಿರ್ದೇಶಕ ಜಾಲಿ ಬ್ಯಾಸ್ಟೀನ್, ವಾರದಿಂದ ಇಬ್ಬರಿಗೂ ಟ್ರೇನಿಂಗ್ ಸಹ ನಿಡಲಾಗಿದೆ. 3 ಬಾರಿ ರಿಹರ್ಸಲ್ ಸಹ ನಡೆಸಿದ್ದಾರೆ.  ಟೇಕ್ ಪಡೆಯುವ ವೇಳೆ ಕೋಮಲ್ ಆಕ್ಸಿಲರೇಟರ್ ಹೆಚ್ಚು ಮಾಡಿದ್ದರಿಂದ ಅವಘಡ ಸಂಭವಿಸಿದೆ. ಚಿಕಿತ್ಸೆ ಪಡೆದ ಬಳಿಕ ಮತ್ತೆ ಶೂಟಿಂಗ್`ಗೆ ತೆರಳಲಿದ್ದಾರೆಂದು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚನ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಗಲಿದೆ 3 ಭರ್ಜರಿ ಗಿಫ್ಟ್