Publish Date: Wed, 30 Aug 2017 (08:31 IST)
Updated Date: Wed, 30 Aug 2017 (08:33 IST)
ಬೆಂಗಳೂರು: ಮುನಿರತ್ನ ನಿರ್ಮಾಣದಲ್ಲಿ ಕುರುಕ್ಷೇತ್ರ ಎಂಬ ಬಿಗ್ ಬಜೆಟ್ ನ ಪೌರಾಣಿಕ ಚಿತ್ರ ಬರಲಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಇನ್ನೊಂದು ಪೌರಾಣಿಕ ಚಿತ್ರದ ಬಗ್ಗೆ ಸುದ್ದಿ ಬಂದಿದೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮಹಾಭಾರತ ಎಂಬ ಸಿನಿಮಾ ಬರಲಿದೆಯಂತೆ. ಇದೂ ಕೂಡಾ ಬಿಗ್ ಬಜೆಟ್ ಚಿತ್ರವಾಗಲಿದ್ದು, ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ಏಕ ಕಾಲಕ್ಕೆ ಮೂಡಿ ಬರಲಿವೆ ಎಂಬ ಸುದ್ದಿ ಬಂದಿದೆ.
ಬಹುಶಃ ಕುರುಕ್ಷೇತ್ರದ ನಂತರ ಸ್ಯಾಂಡಲ್ ವುಡ್ ನಲ್ಲಿ ಪೌರಾಣಿಕ ಚಿತ್ರದ ಟ್ರೆಂಡ್ ಸೃಷ್ಟಿಯಾಗಬಹುದೇನೋ ಎಂಬ ಊಹೆಗಳಿತ್ತು. ಅದರ ಬೆನ್ನಲ್ಲೇ ಈಗ ಮಹಾಭಾರತದ ಸುದ್ದಿ ಬಂದಿದೆ. ಅಂದ ಹಾಗೆ, ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆಯಷ್ಟೇ.