Publish Date: Fri, 14 Jul 2017 (12:44 IST)
Updated Date: Fri, 14 Jul 2017 (12:46 IST)
ಬೆಂಗಳೂರು: ಸಿನಿಮಾ ಮಂದಿಯೇ ಹಾಗೆ. ತಮ್ಮ ಪಾತ್ರದ ಅನುಕೂಲಕ್ಕೆ ತಕ್ಕಂತೆ ಏನೇನೋ ಸರ್ಕಸ್ ಮಾಡಬೇಕಾಗುತ್ತದೆ. ಅದೇ ಕೆಲಸವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಮಾಡಿದ್ದಾರೆ.
ಕುರುಕ್ಷೇತ್ರ ಎಂಬ ಬಿಗ್ ಬಜೆಟ್ ಪೌರಾಣಿಕ ಸಿನಿಮಾದಲ್ಲಿ ರವಿಚಂದ್ರನ್ ಶ್ರೀಕೃಷ್ಣನ ಪಾತ್ರಮಾಡಲಿದ್ದಾರೆ. ಶ್ರೀ ಕೃಷ್ಣನ ಪಾತ್ರಕ್ಕೆ ಫಿಟ್ ಆಂಡ್ ಹ್ಯಾಂಡ್ಸಮ್ ಆಗಬೇಕು. ಅದಕ್ಕಾಗಿ ರವಿಚಂದ್ರನ್ ತಮ್ಮ ಮೈ ತೂಕ ಇಳಿಸಿಕೊಳ್ಳುತ್ತಿದ್ದಾರೆ.
ಇದಕ್ಕಾಗಿ ರವಿಚಂದ್ರನ್ ತಮ್ಮ ಮೆಚ್ಚಿನ ಮಾಂಸಾಹಾರವನ್ನೇ ಬಿಟ್ಟಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಇಷ್ಟದ ಆಹಾರವನ್ನೆಲ್ಲಾ ಬಿಟ್ಟು ಸಂಪೂರ್ಣ ಡಯಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಕುರುಕ್ಷೇತ್ರ ಯುದ್ಧಕ್ಕೆ ತಯಾರಾಗುತ್ತಿದ್ದಾರೆ ಕ್ರೇಜಿಸ್ಟಾರ್.