Publish Date: Mon, 31 Jul 2017 (09:22 IST)
Updated Date: Mon, 31 Jul 2017 (09:25 IST)
ಬೆಂಗಳೂರು: ಮುನಿರತ್ನ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷೆಯ ‘ಕುರುಕ್ಷೇತ್ರ’ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಆದರೆ ಈ ಚಿತ್ರದಲ್ಲಿ ಕರ್ಣನ ಪಾತ್ರ ಮಾಡಬೇಕಾಗಿದ್ದಕ್ಕೆ ಶಿವರಾಜ್ ಕುಮಾರ್ ಬೇಸರದಲ್ಲಿದ್ದಾರೆ.
ಅದಕ್ಕೆ ಕಾರಣ ಅವರ ಡೇಟ್ಸ್ ಸಮಸ್ಯೆ. ಮೊದಲು ಕರ್ಣನ ಪಾತ್ರ ಮಾಡಲು ಶಿವಣ್ಣನಿಗೆ ಆಫರ್ ನೀಡಲಾಗಿತ್ತಂತೆ. ಆದರೆ ಡೇಟ್ ಸಮಸ್ಯೆಯಿಂದಾಗಿ ಮತ್ತು ತೂಕದ ಸಮಸ್ಯೆಯಿಂದಾಗಿ ಆ ಪಾತ್ರದಲ್ಲಿ ಅಭಿನಯಿಸಲು ಶಿವಣ್ಣನಿಗೆ ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಶಿವಣ್ಣ ಮತ್ತು ದರ್ಶನ್ ನಡುವೆ ಸರಿಯಿಲ್ಲ ಎಂದು ಯಾರೋ ಸುದ್ದಿ ಹಬ್ಬಿಸಿದ್ದರು. ಅದು ಅವರಿಗೆ ನೋವಾಗಿದೆಯಂತೆ. ನಮ್ಮಿಬ್ಬರ ಸ್ನೇಹ ದುರ್ಯೋಧನ, ಕರ್ಣನ ಪಾತ್ರದಂತೆ. ದರ್ಶನ್ ದುರ್ಯೋಧನನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಬಲ್ಲರು. ಕರ್ಣನ ಪಾತ್ರ ಮಾಡಲು ಸಾಧ್ಯವಾಗದ್ದಕ್ಕೆ ನನಗೆ ಬೇಸರವಿದೆ. ಆ ಪಾತ್ರವನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ