Publish Date: Sat, 09 Sep 2017 (11:29 IST)
Updated Date: Sat, 09 Sep 2017 (11:32 IST)
ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ರೊಮ್ಯಾಂಟಿಕ್ ಟ್ವಿಟರ್ ಸಂಭಾಷಣೆ ನೋಡಿ ಇವರ ನಡುವೆ ಲವ್ವು ಶುರುವಾಗಿದೆ ಎಂದೇ ಎಲ್ಲರೂ ಗುಸು ಗುಸು ಪ್ರಾರಂಭಿಸಿದ್ದರು.
ಆದರೆ ಈ ಗಾಸಿಪ್ ಬಗ್ಗೆ ಇದೀಗ ಸ್ವತಃ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ ಅರ್ಥವಿಲ್ಲದ್ದು. ನಮ್ಮಿಬ್ಬರ ನಡುವೆ ಅಂತಹದ್ದು ಏನೂ ಇಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ.
‘ಇಂತಹ ರೂಮರ್ ಗಳಿಗೆಲ್ಲಾ ನನ್ನ ಬಳಿ ಉತ್ತರವಿಲ್ಲ. ನನಗೆ ಆಕೆಯನ್ನು ಸರಿಯಾಗಿ ಗೊತ್ತೇ ಇಲ್ಲ. ನಾವು ಟ್ವಿಟರ್ ಬಿಟ್ಟು, ಮುಖತಃ ಇದುವರೆಗೆ ಮಾತುಕತೆ ನಡೆಸಿಲ್ಲ. ಜನ ಹೇಗೆ ಟ್ವಿಟರ್ ಸಂಭಾಷಣೆ ನೋಡಿ ನಮ್ಮ ನಡುವೆ ಸಂಬಂಧ ಕಲ್ಪಿಸುತ್ತಾರೋ.. ನೋಡಿಯೇ ನನಗೆ ನಗು ಬಂತು’ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ.