Select Your Language

Notifications

webdunia
webdunia
webdunia
webdunia

ಲೇಡೀಸ್ ಫಸ್ಟ್ ಎನ್ನಲಿದೆ ಟೀಂ ಇಂಡಿಯಾ

ಲೇಡೀಸ್ ಫಸ್ಟ್ ಎನ್ನಲಿದೆ ಟೀಂ ಇಂಡಿಯಾ
ಮುಂಬೈ , ಶನಿವಾರ, 16 ಸೆಪ್ಟಂಬರ್ 2017 (10:21 IST)
ಮುಂಬೈ: ಟೀಂ ಇಂಡಿಯಾ ಪುರುಷರ ಕ್ರಿಕೆಟ್ ತಂಡ ದ. ಆಫ್ರಿಕಾ ಪ್ರವಾಸ ಮಾಡುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಪುರುಷ ಕ್ರಿಕೆಟಿಗರ ಜತೆ ಮಹಿಳಾ ಕ್ರಿಕೆಟಿಗರೂ ಆಫ್ರಿಕಾ ಪ್ರವಾಸ ಮಾಡಲಿದ್ದಾರೆ.


ಪುರುಷರ ತಂಡದ ಜತೆ ಮಹಿಳೆಯರ ಟಿ20 ಸರಣಿ ಆಯೋಜಿಸಲು ದ. ಆಫ್ರಿಕಾ ಬಿಸಿಸಿಐಗೆ ಆಹ್ವಾನವಿತ್ತಿದೆ. ಈ ಮನವಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ. ಹೀಗಾಗಿ ಪುರುಷರ ಜತೆ ಮಹಿಳೆಯರೂ ಆಪ್ರಿಕಾ ಸಫಾರಿ ಮಾಡಲಿದ್ದಾರೆ.

ವಿಶೇಷವೆಂದರೆ ಪುರುಷರು ಕ್ರಿಕೆಟ್ ಆಡಲಿರುವ ಅದೇ ಮೈದಾನದಲ್ಲಿ ಮೊದಲು ಮಹಿಳಾ ತಂಡ ಸೆಣಸಲಿದೆ. ಅದಾದ ಬಳಿಕ ಪುರುಷರ ಪಂದ್ಯ ನಡೆಯುವುದು. ಪುರುಷ ಕ್ರಿಕೆಟಿಗರ ಪಂದ್ಯಕ್ಕೆ ನೇರ ಪ್ರಸಾರ ಮಾಡಲಿರುವ ವಾಹಿನಿ, ವೀಕ್ಷಕ ವಿವರಣೆಕಾರರು ಮಹಿಳಾ ತಂಡಕ್ಕೂ ಕೆಲಸ ಮಾಡಲಿದ್ದಾರೆ. ಇದರಿಂದಾಗಿ ಮಹಿಳಾ ತಂಡಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎನ್ನುವುದು ಆಫ್ರಿಕಾ ಕ್ರಿಕೆಟ್ ಮಂಡಳಿ ಲೆಕ್ಕಾಚಾರ.

ಇದನ್ನೂ ಓದಿ.. ರಜನಿ ಜತೆ ಕೈ ಜೋಡಿವುದಕ್ಕೆ ನಾನು ರೆಡಿ ಎಂದ ಕಮಲ್ ಹಾಸನ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಯನ್ನು ಸ್ವೀಪರ್ ಎಂದವನ ವಿರುದ್ಧ ಹರ್ಭಜನ್ ಕಿಡಿ ಕಿಡಿ