Publish Date: Sat, 16 Sep 2017 (09:14 IST)
Updated Date: Sat, 16 Sep 2017 (09:18 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಸ್ಟೈಲ್ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದರೆ, ಕೋಚ್ ರವಿಶಾಸ್ತ್ರಿ ಮಾತ್ರ ತಮ್ಮ ಹುಡುಗರನ್ನು ಸಮರ್ಥಿಸಿಕೊಂಡಿದ್ದಾರೆ.
ಕೆಎಲ್ ರಾಹುಲ್, ಕೊಹ್ಲಿ, ಜಡೇಜಾರಂತಹ ಆಟಗಾರರು ಆಗಾಗ ಕೇಶ ವಿನ್ಯಾಸ ಬದಲಿಸುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನು ಇಲ್ಲ ಎಂದು ಕೋಚ್ ಶಾಸ್ತ್ರಿ ಹೇಳಿಕೊಂಡಿದ್ದಾರೆ.
ನಮ್ಮ ಆಟಗಾರರು ಯಾವ ಫ್ಯಾಷನ್ ನವರಿಗೂ ಕಮ್ಮಿಯಿಲ್ಲ. ಅವರಿಗೆ ಇದೆಲ್ಲಾ ಇಷ್ಟ. ಅದು ಅವರಿಗೆ ಹೊಸ ಉತ್ಸಾಹ ತುಂಬುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸುನಿಲ್ ಗವಾಸ್ಕರ್ ಟೀಂ ಇಂಡಿಯಾದಲ್ಲಿ ಫ್ಯಾಶನ್ ಮಾಡೋರಿಗಷ್ಟೇ ಸ್ಥಾನ ಎಂದು ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.