Publish Date: Sat, 16 Sep 2017 (08:38 IST)
Updated Date: Sat, 16 Sep 2017 (08:45 IST)
ಮುಂಬೈ: ಈ ಸರಣಿಯಲ್ಲಿ ಕೇವಲ ಕ್ರಿಕೆಟ್ ಮಾತ್ರ. ಮಾನಸಿಕ ಯುದ್ಧಕ್ಕೆ ಆಸ್ಪದ ಕೊಡಲ್ಲ ಎಂದು ಭಾರತಕ್ಕೆ ಬಂದಿಳಿದ ಕ್ಷಣದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದರು. ಆದರೆ ಅವರ ತಂಡದ ಆಟಗಾರರೇ ಅದನ್ನು ಮುರಿದಿದ್ದಾರೆ.
ಮಾನಸಿಕವಾಗಿ ಎದುರಾಳಿಯನ್ನು ಕುಗ್ಗಿಸುವುದು ಆಸ್ಟ್ರೇಲಿಯನ್ನರ ಚಾಳಿ. ಅದನ್ನು ಯಾವತ್ತೂ ಬಿಡಲ್ಲ ಎನ್ನುವುದನ್ನು ಆಸೀಸ್ ಆಟಗಾರ ಆಶ್ತೋನ್ ಅಗರ್ ಸಾಬೀತುಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಖರ್ ಧವನ್ ಅನುಪಸ್ಥಿತಿಯನ್ನು ಕೆಣಕಿದ್ದಾರೆ. ಧವನ್ ಇಲ್ಲದೇ ಇರುವುದು ಟೀಂ ಇಂಡಿಯಾಕ್ಕೆ ದೊಡ್ಡ ಕೊರತೆಯಾಗಲಿದೆ ಎಂದಿದ್ದಾರೆ. ಅವರು ಆಡದೇ ಇರುವುದೇ ನಮಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂದಿದ್ದಾರೆ. ಭಾರತದ ವಿರುದ್ಧ ನಡೆಯಲಿರುವ ಸರಣಿಗೆ ತಾಲೀಮು ನಡೆಸಲು ಆಸೀಸ್ ತಂಡ ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ ಬೀಡುಬಿಟ್ಟಿದೆ.