Publish Date: Fri, 15 Sep 2017 (09:26 IST)
Updated Date: Fri, 15 Sep 2017 (09:29 IST)
ಮುಂಬೈ: ಮುಂದಿನ ವಿಶ್ವಕಪ್ ನಲ್ಲಿ ಧೋನಿ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳಿಗೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಉತ್ತರಿಸಿದ್ದು, ಧೋನಿ ಇಲ್ಲದ ಟೀಂ ಇಂಡಿಯಾವನ್ನು ಊಹಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.
ಧೋನಿಯಂತಹ ಆಟಗಾರರನ್ನು ಎಷ್ಟು ಬಾರಿ ನೀವು ನೋಡಲು ಸಾಧ್ಯವಿದೆ? ಅವರಿಲ್ಲದ ವಿಶ್ವಕಪ್ ತಂಡವನ್ನು ಊಹಿಸಲೂ ಅಸಾಧ್ಯ ಎಂದಿದ್ದಾರೆ. ಧೋನಿ ಸಚಿನ್, ಕಪಿಲ್ ದೇವ್ ರಂತಹ ದಂತಕತೆಗಳ ಸಾಲಿನಲ್ಲಿ ಬರುವ ಆಟಗಾರ ಎಂದು ಶಾಸ್ತ್ರಿ ಹೇಳಿದ್ದಾರೆ.
ಧೋನಿ ಈಗಲೂ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರ ವಿಕೆಟ್ ಕೀಪಿಂಗ್ ಕೂಡಾ ಅದ್ಭುತವಾಗಿದೆ. ಅವರೊಬ್ಬ ಉತ್ಕೃಷ್ಟ ಆಟಗಾರ ಎಂದು ಕೋಚ್ ಶಾಸ್ತ್ರಿ ಹೊಗಳಿದ್ದಾರೆ.