Publish Date: Thu, 14 Sep 2017 (09:55 IST)
Updated Date: Thu, 14 Sep 2017 (09:57 IST)
ಮುಂಬೈ: ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ಆಸ್ಟ್ರೇಲಿಯಾ ಪಡೆ ಕಳೆದ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
ಈ ಏಕದಿನ ಸರಣಿಯಲ್ಲಿ ತಮ್ಮ ಗೇಮ್ ಪ್ಲ್ಯಾನ್ ಏನು ಎಂಬುದನ್ನು ಆಸೀಸ್ ಕೋಚ್ ಡೇವಿಡ್ ಸಾಕರ್ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಅಸ್ತ್ರ ವೇಗಿ ಪ್ಯಾಟ್ ಕ್ಯುಮಿನ್ಸ್. ಅವರನ್ನು ಎಲ್ಲಾ ಐದು ಪಂದ್ಯ ಆಡುವಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ಯಾಟ್ ಕ್ಯುಮಿನ್ಸ್ ಗೆ ಹೆಚ್ಚಿನ ಒತ್ತಡ ಬೀಳುತ್ತದೆ. ಹಾಗಿದ್ದರೂ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗಿಂತ ದೊಡ್ಡದು ಯಾವುದೂ ಇಲ್ಲ. ಇಲ್ಲಿ ಐದೂ ಪಂದ್ಯಗಳಲ್ಲಿ ಅವರನ್ನು ಆಡಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುವುದು ನಮ್ಮ ಪ್ಲ್ಯಾನ್ ಎ ಆಗಿರುತ್ತದೆ ಎಂದು ಸಾಕರ್ ಹೇಳಿಕೊಂಡಿದ್ದಾರೆ.