Publish Date: Wed, 13 Sep 2017 (09:05 IST)
Updated Date: Wed, 13 Sep 2017 (09:08 IST)
ಕಾನ್ಪುರ: ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ರಕ್ಷಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಇಟವಾದಲ್ಲಿ ಘಟನೆ ನಡೆದಿದೆ. ಅಪಘಾತವಾಗುವಾಗ ಸ್ವತಃ ರೈನಾ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲು ದೆಹಲಿಯಿಂದ ಕಾನ್ಪುರಕ್ಕೆ ತಮ್ಮ ರೇಂಜ್ ರೋವರ್ ಕಾರ್ ನಲ್ಲಿ ರೈನಾ ಪ್ರಯಾಣ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಕಾರಿನ ಚಕ್ರವೊಂದು ಸ್ಪೋಟಗೊಂಡು ಅಪಘಾತಕ್ಕೀಡಾಯಿತು. ಆದರೆ ಕಾರು ವೇಗವಾಗಿ ಚಲಾಯಿಸುತ್ತಿರದ ಕಾರಣ ಅಪಾಯ ಸಂಭವಿಸಿಲ್ಲ. ನಂತರ ರೈನಾ ಇನ್ನೊಂದು ಕಾರಿನ ಮೂಲಕ ತಮ್ಮ ಪ್ರಯಾಣ ಮುಂದುವರಿಸಿದರು ಎಂದು ಮೂಲಗಳು ಹೇಳಿವೆ.