Select Your Language

Notifications

webdunia
webdunia
webdunia
webdunia

ಧೋನಿಗೂ, ಕೊಹ್ಲಿಗೂ ಬೆಣ್ಣೆ ಸವರಿದ ಯಜುವೇಂದ್ರ ಚಾಹಲ್

ಧೋನಿಗೂ, ಕೊಹ್ಲಿಗೂ ಬೆಣ್ಣೆ ಸವರಿದ ಯಜುವೇಂದ್ರ ಚಾಹಲ್
ಮುಂಬೈ , ಬುಧವಾರ, 13 ಸೆಪ್ಟಂಬರ್ 2017 (08:53 IST)
ಮುಂಬೈ: ನನಗೆ ತಂಡದಲ್ಲಿ ಮಾರ್ಗದರ್ಶನ ನೀಡಲು ಇಬ್ಬರು ಮಾರ್ಗದರ್ಶಕರಿದ್ದಾರೆ ಎಂದು ಧೋನಿ ಮತ್ತು ವಿರಾಟ್ ಕೊಹ್ಲಿಗೆ  ಯಜುವೇಂದ್ರ ಚಾಹಲ್ ಬೆಣ್ಣೆ ಹಚ್ಚಿದ್ದಾರೆ.

 
ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ಚಾಹಲ್ ಧೋನಿ ಮತ್ತು ಕೊಹ್ಲಿ ನನಗೆ ಯಾವತ್ತೂ ಸೂಕ್ತ ಸಲಹೆ ನೀಡುತ್ತಿರುತ್ತಾರೆ. ಅವರಿಬ್ಬರೂ ನನ್ನ ಪಾಲಿಗೆ ಬೆಳಕು ತೋರುವ ಮಾರ್ಗದರ್ಶಕರು ಎಂದಿದ್ದಾರೆ.

‘ನಾಯಕ ಕೊಹ್ಲಿ ನನಗೆ ಗೆಳೆಯನಂತೆ ಆತ್ಮವಿಶ್ವಾಸ ತುಂಬುತ್ತಿರುತ್ತಾರೆ. ಮಹಿ ನನಗೆ ಮೆಂಟರ್ ನಂತೆ. ಸಮಸ್ಯೆ ಬಂದಾಗ ಸೂಕ್ತ ಸಲಹೆ ನೀಡುತ್ತಾರೆ. ನನ್ನ ಮೇಲೆ ವಿಶ್ವಾಸವಿಡುವ ನಾಯಕನಿಗೆ ಧನ್ಯವಾದ ಸಲ್ಲಿಸುತ್ತೇನೆ. ಅದೇ ರೀತಿ ವಿಕೆಟ್ ಹಿಂದುಗಡೆ ಇದ್ದುಕೊಂಡು ಬ್ಯಾಟ್ಸ್ ಮನ್ ನ ಯೋಜನೆಯನ್ನು ನಿಖರವಾಗಿ ನನಗೆ ತಿಳಿಸುವ ಧೋನಿಗೆ ಅಭಾರಿಯಾಗಿರುತ್ತೇನೆ’ ಎಂದು ಚಾಹಲ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಮತ್ತೆ ಕಾಲೆಳೆಯುವವರ ಮುಂದೆ ಜಾರಿಬಿದ್ದ ರಾಹುಲ್ ಗಾಂಧಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಹೆಸರು ಬರೆಯುವಾಗ ಪ್ರಮಾದ ಮಾಡಿಕೊಂಡ ಇಂಗ್ಲೆಂಡ್ ಆಟಗಾರ್ತಿ!