Publish Date: Tue, 12 Sep 2017 (10:29 IST)
Updated Date: Tue, 12 Sep 2017 (10:32 IST)
ನವದೆಹಲಿ: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನಿಯಲ್ ವ್ಯಾಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಹೆಸರನ್ನು ತಪ್ಪಾಗಿ ಬರೆದುಕೊಂಡು ಟ್ವಿಟರ್ ನಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಮಿಥಾಲಿ ರಾಜ್ ಬಳಗವನ್ನು ವಿಶ್ವಕಪ್ ಫೈನಲ್ ನಲ್ಲಿ ಸೋಲಿಸಿದ ಇಂಗ್ಲೆಂಡ್ ತಂಡದ ನಾಯಕಿ ಡೇನಿಯಲ್ ತಾವ 2014 ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ಕೊಹ್ಲಿಯಿಂದ ಉಡುಗೊರೆಯಾಗಿ ಪಡೆದಿದ್ದ ಬ್ಯಾಟ್ ನ ಫೋಟೋವೊಂದನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
ಈ ಬ್ಯಾಟ್ ನ ತುದಿಯಲ್ಲಿ ಅವರು ವಿರಾಟ್ ಕೊಹ್ಲಿ ಎಂದು ಅಭಿಮಾನದಿಂದ ಬರೆದುಕೊಂಡಿದ್ದಾರೆ. ಫೋಟೋದ ಜತೆಗೆ ‘ಈ ಬ್ಯಾಟ್ ನಲ್ಲಿ ಅಭ್ಯಾಸ ನಡೆಸಲು ಉತ್ಸುಕಳಾಗಿದ್ದೇನೆ’ ಎಂದು ಬರೆದುಕೊಂಡಿದ್ದರು.
ಆದರೆ ಬ್ಯಾಟ್ ನ ತುದಿಯಲ್ಲಿ ಅವರು ವಿರಾಟ್ ಕೊಹ್ಲಿ ಎಂದು ಬರೆಯುವಾಗ ಸ್ಪೆಲ್ಲಿಂಗ್ ತಪ್ಪು ಮಾಡಿಕೊಂಡಿದ್ದಾರೆ. ಕೊಹ್ಲಿ ಬದಲು ಖೋಲಿ ಎಂದು ಬರೆದುಕೊಂಡಿದ್ದಾರೆ. ಜತೆಗೆ ಖೋಲಿ ಎಂದರೆ ಭಾರತದ ಪ್ರಾದೇಶಿಕ ಭಾಷೆಯಲ್ಲಿ ಕೋಣೆ ಎಂದು ಅರ್ಥ ಎಂದು ಇಂಗ್ಲೆಂಡ್ ಆಟಗಾರ್ತಿಗೆ ಅರ್ಥಮಾಡಿಸಿದ್ದಾರೆ.