Publish Date: Thu, 14 Sep 2017 (09:13 IST)
Updated Date: Thu, 14 Sep 2017 (09:16 IST)
ನವದೆಹಲಿ: ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ ಘಾಟೆ ನಡುವಿನ ವಿವಾಹ ದಿನಾಂಕ ಫಿಕ್ಸ್ ಆಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ನವಂಬರ್ 27 ಕ್ಕೆ ಇವರಿಬ್ಬರು ಸಪ್ತಪದಿ ತುಳಿಯಲಿದ್ದಾರೆ. ಹಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದ ಇವರಿಬ್ಬರು ಏಪ್ರಿಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ನವಂಬರ್ 27 ರಂದು ಮುಂಬೈ ಮತ್ತು ಪುಣೆಯಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ವರದಿಯಾಗಿದೆ.
ವಿವಾಹ ಸಮಾರಂಭ ತೀರಾ ಖಾಸಗಿಯಾಗಿ ನಡೆಯಲಿದ್ದು, ಆಪ್ತೇಷ್ಟರು ಮತ್ತು ಕುಟುಂಬದವರಿಗೆ ಮಾತ್ರ ಆಹ್ವಾನವಿರಲಿದೆ ಎನ್ನಲಾಗಿದೆ. ಸಾಗರಿಕಾ ಘಾಟೆ ಚಕ್ ದೇ ಇಂಡಿಯಾ ಸಿನಿಮಾದ ಮೂಲಕ ಬಾಲಿವುಡ್ ಗೆ ಪರಿಚಯವಾಗಿದ್ದರು.