Publish Date: Thu, 14 Sep 2017 (08:30 IST)
Updated Date: Thu, 14 Sep 2017 (08:35 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ಕಳೆದ ಬಾರಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಸಂಬಂಧ ಹಳಸಿತ್ತು. ಉಭಯ ನಾಯಕರು ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು. ಇದೀಗ ಅದು ಮತ್ತೆ ಶುರುವಾಗುತ್ತಾ?
ಈ ಇಬ್ಬರು ಆಟಗಾರರು ಪರಸ್ಪರ ಹೇಗಿರುತ್ತಾರೋ ಗೊತ್ತಿಲ್ಲ. ಆದರೆ ಭಾರತದಲ್ಲಿ ನಡೆಯಲಿರುವ ಏಕದಿನ ಸರಣಿಗೂ ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಮಿತ್ ನಡುವೆ ಯಾರು ಶ್ರೇಷ್ಠ ಎಂದು ವಿಶ್ಲೇಷಿಸುವ ಮೂಲಕ ಮತ್ತೆ ಕೊಹ್ಲಿv/s ಸ್ಮಿತ್ ಕದನಕ್ಕೆ ನಾಂದಿ ಹಾಡಿದ್ದಾರೆ.
ಸೀಮಿತ ಓವರ್ ಗಳ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಗೆ ಹೋಲಿಸಿದರೆ ಕೊಹ್ಲಿ ಇನ್ನೂ ಉತ್ತಮ ಬ್ಯಾಟ್ಸ್ ಮನ್. ಆದರೆ ಸುದೀರ್ಘ ಮಾದರಿಯ ಕ್ರಿಕೆಟ್ ನಲ್ಲಿ ಸ್ಮಿತ್ ಬೆಸ್ಟ್ ಎಂದು ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಇದೀಗ ಮತ್ತೆ ಸೆ. 17 ರಿಂದ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಜತೆಗೆ ಕೊಹ್ಲಿ ಮತ್ತು ಸ್ಮಿತ್ ನಡುವೆ ಯಾರು ಉತ್ತಮ ಎಂಬ ವಾದ, ಪ್ರತಿವಾದಕ್ಕೂ ಇದು ಮುನ್ನುಡಿಯಾಗಲಿದೆ.