Publish Date: Fri, 15 Sep 2017 (09:14 IST)
Updated Date: Fri, 15 Sep 2017 (09:24 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಮತ್ತೆ ಕೌಟುಂಬಿಕ ಕಾರಣ ನೀಡಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಆಸೀಸ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ.
ಸೆಪ್ಟೆಂಬರ್17 ರಿಂದ ಆರಂಭವಾಗಲಿರುವ ಆಸೀಸ್ ವಿರುದ್ಧ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ತಂಡದ ಆಯ್ಕೆ ಮಾಡಲಾಗಿದ್ದು, ಧವನ್ ಸ್ಥಾನ ಪಡೆದಿದ್ದರು. ಆದರೆ ಧವನ್ ಕೌಟುಂಬಿಕ ಸಮಸ್ಯೆಯಿಂದಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐಗೆ ಸ್ಪಷ್ಟಪಡಿಸಿದ್ದಾರೆ.
ಲಂಕಾ ಏಕದಿನ ಸರಣಿಯ ನಡುವಿನಲ್ಲಿ ತಾಯಿಗೆ ಅನಾರೋಗ್ಯವೆಂದು ಧವನ್ ತವರಿಗೆ ವಾಪಸಾಗಿದ್ದರು. ಇದೀಗ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದು ಆಕೆಯೊಂದಿಗೆ ಇರಬೇಕಾಗಿರುವುದರಿಂದ ಸರಣಿ ತಪ್ಪಿಸಿಕೊಳ್ಳಲಿದ್ದಾರೆ.