Publish Date: Fri, 15 Sep 2017 (10:49 IST)
Updated Date: Fri, 15 Sep 2017 (10:52 IST)
ಮುಂಬೈ: ಟೀಂ ಇಂಡಿಯಾ ವಿರಾಟ್ ಕೊಹ್ಲಿ ಜಾಹೀರಾತು ಮಾರುಕಟ್ಟೆಯಲ್ಲಿ ಎಷ್ಟು ದುಬಾರಿ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಬಹುಕೋಟಿ ಮೊತ್ತದ ಜಾಹೀರಾತು ಒಪ್ಪಂದವೊಂದನ್ನು ನಿರಾಕರಿಸಿದ್ದಾರೆ.
ಕೊಹ್ಲಿಯೆಂದರೆ ಎಲ್ಲರೂ ಅನುಕರಿಸುವ ವ್ಯಕ್ತಿ. ಹಾಗಾಗಿ ತಾವು ಬಳಸದ, ಆರೋಗ್ಯಕರವಲ್ಲದ ವಸ್ತುವೊಂದರ ರಾಯಭಾರಿಯಾಗಲು ಒಪ್ಪುವುದಿಲ್ಲ ಎಂದು ಕೊಹ್ಲಿ ಹೇಳಿದ್ದರು.
ಇದೀಗ ಕೊಹ್ಲಿ ಇದೇ ಕಾರಣಕ್ಕೆ ಬಹುಕೋಟಿ ಮೊತ್ತದ ಸಾಫ್ಟ್ ಡ್ರಿಂಕ್ ಸಂಸ್ಥೆಯ ರಾಯಭಾರಿ ಒಪ್ಪಂದವನ್ನು ತಳ್ಳಿ ಹಾಕಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಫಿಟ್ ನೆಸ್ ವಿಷಯದಲ್ಲಿ ಸ್ಟ್ರಿಕ್ಟ್ ಆಗಿ ನಿಯಮ ಫಾಲೋ ಮಾಡುವ ಕೊಹ್ಲಿ, ಯಾವುದೇ ಕಾರಣಕ್ಕೂ ಇಂತಹ ಅನಾರೋಗ್ಯಕರ ಪಾನೀಯ ಸೇವಿಸುವುದಿಲ್ಲ. ಹಾಗಾಗಿ ತಾವು ಸೇವಿಸದ ಪಾನೀಯವೊಂದನ್ನು ಸೇವಿಸಿ ಎಂದು ಯುವಜನತೆಗೆ ಸಲಹೆ ಮಾಡುವುದಿಲ್ಲ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.