Publish Date: Mon, 18 Sep 2017 (11:18 IST)
Updated Date: Mon, 18 Sep 2017 (11:21 IST)
ಚೆನ್ನೈ: ಟೀಂ ಇಂಡಿಯಾ ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಸಂಕಟದಲ್ಲಿದ್ದಾಗ ಬ್ಯಾಟಿಂಗ್ ಮಾಡಿ ಗೆಲುವಿನ ರೂವಾರಿಯಾದ ಹಾರ್ದಿಕ್ ಪಾಂಡ್ಯ ಇಷ್ಟು ಮಾಡಿದ ಮೇಲೂ ಟ್ವಿಟರಿಗರ ಬಾಯಿಗೆ ಆಹಾರವಾಗಿದ್ದಾರೆ.
ಇದಕ್ಕೆಲ್ಲಾ ಕಾರಣವಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಡಿದ ಟ್ವೀಟ್. ಚೆನ್ನೈ ಆಟಗಾರ ಧೋನಿ, ಮುಂಬೈ ಆಟಗಾರ ಹಾರ್ದಿಕ್ ಟೀಂ ಇಂಡಿಯಾವನ್ನು ದಡ ಮುಟ್ಟಿಸುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ಎಂದು ಸಿಎಸ್ ಕೆ ಟ್ವೀಟ್ ಮಾಡಿತ್ತು. ಆಗಲೇ ಟ್ವಿಟರಿಗರು ಹಾರ್ದಿಕ್ ರನ್ನು ಸೂಕ್ಷ್ಮವಾಗಿ ಗಮನಿಸಿದ್ದು.
ಟೀಂ ಇಂಡಿಯಾ ಜೆರ್ಸಿ ತೊಟ್ಟು ಆಡುತ್ತಿದ್ದ ಹಾರ್ದಿಕ್ ಕೈಗೆ ಮುಂಬೈ ಇಂಡಿಯನ್ಸ್ ತಂಡದ ಗ್ಲೌಸ್ ಹಾಕಿಕೊಂಡಿದ್ದರು. ಇಷ್ಟೇ ಸಾಕಾಯಿತು ಟ್ವಿಟರಿಗರಿಗೆ. ಟೀಂ ಇಂಡಿಯಾ ಪರ ಆಡುವಾಗಲೂ ಮುಂಬೈ ತಂಡದ ಗ್ಲೌಸ್ ಹಾಕಲು ಕಾರಣವೇನು ಎಂದು ಒಬ್ಬರು ಕೇಳಿದರೆ ಇನ್ನೊಬ್ಬರು ದಿಲ್ ಸೇ ಇಂಡಿಯನ್ ಮುಂಬೈ ಇಂಡಿಯನ್ ಎಂದು ಕಾಲೆಳೆದಿದ್ದಾರೆ. ಅಂತೂ ಅಷ್ಟೆಲ್ಲಾ ಕಷ್ಟಪಟ್ಟ ಮೇಲೂ ಪಾಂಡ್ಯಗೆ ತಮಾಷೆ ತಪ್ಪಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ