Publish Date: Tue, 19 Sep 2017 (08:40 IST)
Updated Date: Tue, 19 Sep 2017 (08:44 IST)
ಚೆನ್ನೈ: ಇತ್ತೀಚೆಗೆ ಕೊಲೊಂಬೋದಲ್ಲಿ ಏಕದಿನ ಪಂದ್ಯ ನಡೆಯುವ ವೇಳೆ ಪ್ರೇಕ್ಷಕರು ಗದ್ದಲವೆಬ್ಬಿಸುತ್ತಿದ್ದರೆ ಧೋನಿ ಮೈದಾನದಲ್ಲೇ ಬ್ಯಾಟ್, ಗ್ಲೌಸ್ ಕಳಚಿಟ್ಟು ಮಲಗಿದ್ದು ಭಾರೀ ವೈರಲ್ ಆಗಿತ್ತು. ಇದೀಗ ಬಿಸಿಸಿಐ ಫೇಸ್ ಬುಕ್ ಪೇಜ್ ನಲ್ಲಿ ಮತ್ತೊಮ್ಮೆ ಧೋನಿಯ ಮಲಗುವ ಖಯಾಲಿ ಬಯಲಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಪ್ರಥಮ ಏಕದಿನ ಪಂದ್ಯ ಮುಗಿದ ಬಳಿಕ ತಂಡದ ಜತೆ ಚೆನ್ನೈಯಿಂದ ತೆರಳುವ ವೇಳೆಗೆ ವಿಮಾನ ನಿಲ್ದಾಣದಲ್ಲಿ ಖಾಲಿ ನೆಲದ ಮೇಲೆ ಮಲಗಿ ರಿಲ್ಯಾಕ್ಸ್ ಆಗುತ್ತಿರುವ ಫೋಟೋ ವೈರಲ್ ಆಗಿದೆ. ಧೋನಿ ಜತೆಗೆ ಟೀಂ ಇಂಡಿಯಾ ಆಟಗಾರರೆಲ್ಲಾ ತಮ್ಮ ಪಾಡಿಗೆ ನೆಲದಲ್ಲಿ ಕುಳಿತಿದ್ದಾರೆ.
ಆದರೆ ಧೋನಿ ಮಾತ್ರ ಅಂಗಾತ ಮಲಗಿಕೊಂಡು ಆರಾಮ ಮಾಡುತ್ತಿದ್ದಾರೆ. ಈ ಫೋಟೋಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧೋನಿ ಎಷ್ಟು ಕೂಲ್ ಎಂದು ನೋಡಿ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಅಂದ ಹಾಗೆ ಮುಂದಿನ ಪಂದ್ಯ ಕೋಲ್ಕೊತ್ತಾದಲ್ಲಿ ಸೆಪ್ಟೆಂಬರ್ 21 ರಂದು ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ