Select Your Language

Notifications

webdunia
webdunia
webdunia
webdunia

ಮದುವೆಯಾಗು ಬಾರೋ.. ಕೊಹ್ಲಿಗೆ ಪಾಕ್ ಪೊಲೀಸಪ್ಪನ ಪ್ರಪೋಸಲ್!

ಮದುವೆಯಾಗು ಬಾರೋ.. ಕೊಹ್ಲಿಗೆ ಪಾಕ್ ಪೊಲೀಸಪ್ಪನ ಪ್ರಪೋಸಲ್!
ಕರಾಚಿ , ಸೋಮವಾರ, 18 ಸೆಪ್ಟಂಬರ್ 2017 (11:53 IST)
ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ಆರಾಧಕರಿದ್ದಾರೆ. ವಿಶ್ವ ಇಲೆವೆನ್ ಜತೆ ಟಿ20 ಪಂದ್ಯವಾಡುತ್ತಿರುವ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳೂ ಕೊಹ್ಲಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ ಅದಕ್ಕೂ ಮೀರಿದ ಅಭಿಮಾನಿಯೊಬ್ಬ ಕೊಹ್ಲಿಗೆ ಪಾಕಿಸ್ತಾನದಲ್ಲಿ ಸಿಕ್ಕಿದ್ದಾರೆ!


ವಿಶ್ವ ಇಲೆವೆನ್ ತಂಡದ ಜತೆಗಿನ ಪಂದ್ಯ ನಡೆಯುತ್ತಿದ್ದ ಗದಾಫಿ ಮೈದಾನದಲ್ಲಿ ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ಬ್ಯಾನರ್ ಹಿಡಿದಿರುವ ಫೋಟೋ ಒಂದು ಈಗ ಇಂಟರ್ ನೆಟ್ ನಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಅದರಲ್ಲಿ ಬರೆದ ಬರಹ ಏನಿತ್ತು ಗೊತ್ತಾ?

‘ಕೊಹ್ಲಿ ನನ್ನ ಮದುವೆಯಾಗುತ್ತೀರಾ?’ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿತ್ತು. ಇದನ್ನು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರೇ ಟ್ವೀಟ್ ಮಾಡಿದ್ದಾರೆ. ಇದೀಗ ಟ್ವಿಟರ್ ನಲ್ಲಿ ತಮಾಷೆಯ ವಸ್ತುವಾಗಿದೆ. ಅಸಲಿಗೆ ಇದು ಪೊಲೀಸ್ ಅಧಿಕಾರಿಯದ್ದೇ ಬಿತ್ತಿಪತ್ರವಾ ಅಥವಾ ಇನ್ನೊಬ್ಬರ ಬಿತ್ತಿಪತ್ರವನ್ನು ಅವರು ಹಿಡಿದುಕೊಂಡಿದ್ದರೋ ಗೊತ್ತಿಲ್ಲ. ಅಂತೂ ತಮಾಷೆಯ ವಸ್ತುವಾಗಿದ್ದಂತೂ ನಿಜ.

ಇದನ್ನೂ ಓದಿ… ಸೆಪ್ಟೆಂಬರ್ 18 ಎಂದರೆ ಕಿಚ್ಚ ಸುದೀಪ್ ಗೆ ಯಾವತ್ತೂ ಸ್ಪೆಷಲ್! ಯಾಕೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯ ಗೆಲ್ಲಿಸಿದರೂ ಹಾರ್ದಿಕ್ ಪಾಂಡ್ಯಗೆ ಟೀಕೆ ತಪ್ಪಲಿಲ್ಲ