Publish Date: Thu, 21 Sep 2017 (11:32 IST)
Updated Date: Thu, 21 Sep 2017 (11:34 IST)
ಬೆಂಗಳೂರು: ಸಿನಿಮಾ ಸಾಕು, ರಾಜಕೀಯವೇ ಬೇಕು ಎಂದಿದ್ದ ನಟಿ ರಮ್ಯಾ ಹೊಸ ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದಕ್ಕೀಗ ಸ್ವತಃ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.
ಮಹೇಂದ್ರನ ಮನಸ್ಸಲ್ಲಿ ಮುಮ್ತಾಜ್ ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅವರನ್ನು ಕರೆತರಲು ಪ್ರಯತ್ನ ನಡೆಸಲಾಗುತ್ತಿದೆಎಂದು ನಿರ್ಮಾಪಕ ನಾಗಶೇಖರ್ ಹೇಳಿಕೊಂಡಿದ್ದರು. ಆದರೆ ಅದೆಲ್ಲಾ ಸುಳ್ಳು ಎಂದು ಸ್ವತಃ ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ಟ್ವಿಟರ್ ಪೇಜ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಮ್ಯಾ ಹೊಸ ಚಿತ್ರದಲ್ಲಿ ಅಭಿನಯಿತ್ತಿರುವ ಸುದ್ದಿಗೆ ‘ಇದೆಲ್ಲಾ ಸುಳ್ಳು’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಅವರು ಹೆಚ್ಚೇನೂ ಹೇಳಿಲ್ಲ. ಆದರೆ ರಮ್ಯಾ ಬರುತ್ತಾರೆಂಬ ಸುದ್ದಿ ಹರಡಿ ಮುಮ್ತಾಜ್ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಿರುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ