Publish Date: Wed, 20 Sep 2017 (08:50 IST)
Updated Date: Wed, 20 Sep 2017 (08:53 IST)
ಬೆಂಗಳೂರು: ಹಲವು ನೈಜಕತೆಗಳನ್ನು ಸಿನಿಮಾ ರೂಪಕ್ಕಿಳಿಸಿದ ಖ್ಯಾತಿ ಹೊಂದಿರುವ ನಿರ್ದೇಶಕ ಎಎಂಆರ್ ರಮೇಶ್ ಗೌರಿ ಲಂಕೇಶ್ ಹತ್ಯೆ ಕುರಿತಾಗಿ ಸಿನಿಮಾ ಮಾಡಲಿದ್ದಾರೆಯೇ? ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಸೈನೈಡ್ ಸಿನಿಮಾ ನಿರ್ದೇಶಕ ಇತ್ತೀಚೆಗೆ ದಕ್ಷ ಪೊಲೀಸ್ ಅಧಿಕಾರಿ ಡಿಐಜಿ ರೂಪಾ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದರು. ಇದೀಗ ಗೌರಿ ಲಂಕೇಶ್ ಹತ್ಯೆ ಬಗ್ಗೆಯೂ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಬಂದಿದೆ.
ಆದರೆ ಇದಿನ್ನೂ ಘೋಷಣೆಯಾಗಿಲ್ಲ. ಗೌರಿ ಲಂಕೇಶ್ ಪ್ರಕರಣದ ಬಗ್ಗೆ ಸದ್ಯಕ್ಕೆ ರಮೇಶ್ ರಿಸರ್ಚ್ ಮಾಡುತ್ತಿದ್ದಾರಂತೆ. ಈ ಪ್ರಕರಣದ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದ ಮೇಲಷ್ಟೇ ಸಿನಿಮಾ ಮಾಡುವ ಬಗ್ಗೆ ತೀರ್ಮಾನಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ