Select Your Language

Notifications

webdunia
webdunia
webdunia
webdunia

ರಾಜಕೀಯ ಬಿಟ್ಟು ಮತ್ತೆ ಬಣ್ಣ ಹಚ್ತಾರಂತೆ ರಮ್ಯಾ

ರಾಜಕೀಯ ಬಿಟ್ಟು ಮತ್ತೆ ಬಣ್ಣ ಹಚ್ತಾರಂತೆ ರಮ್ಯಾ
ಬೆಂಗಳೂರು , ಬುಧವಾರ, 20 ಸೆಪ್ಟಂಬರ್ 2017 (09:11 IST)
ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಪಕ್ಕಾ ರಾಜಕಾರಣಿಯಾಗಿ ಬಿಟ್ಟಿದ್ದಾರೆ. ನಂ.1 ನಟಿಯಾಗಿದ್ದ ರಮ್ಯಾ ಸಿನಿಮಾ ಕಡೆ ತಲೆಯೂ ಹಾಕಿರಲಿಲ್ಲ. ಆದರೆ ಇದೀಗ ಮತ್ತೆ ಬಣ್ಣ ಹಚ್ಚುವ ಮನಸ್ಸು ಮಾಡಿದ್ದಾರಂತೆ.


ನಟ, ನಿರ್ದೇಶಕ ನಾಗಶೇಖರ್ ಭಗೀರಥ ಪ್ರಯತ್ನ ನಡೆಸಿ ರಮ್ಯಾರನ್ನು ತಮ್ಮ ನಿರ್ಮಾಣದ ಹೊಸ ಚಿತ್ರಕ್ಕೆ ಕರೆದೊಯ್ಯುತ್ತಿದ್ದಾರಂತೆ. ಆ ಚಿತ್ರದ ಹೆಸರು ‘ಮಹೇಂದ್ರನ ಮನಸ್ಸಲ್ಲಿ ಮುಮ್ತಾಜ್’ ಎಂದು. ಹೆಸರೇ ಹೇಳುವಾಗೆ ಇದೊಂದು ಹಿಂದೂ ಮುಸ್ಲಿಂ ಹುಡುಗ-ಹುಡುಗಿಯ ಪ್ರೇಮ ಕತೆ. ಹಿರಿಯ ನಿರ್ದೇಶಕ ಎಸ್. ಮಹೇಂದರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಗಣೇಶ್ ಜತೆ ನಾಯಕನ ಪಾತ್ರಕ್ಕೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ರಮ್ಯಾ ಇದರಲ್ಲಿ ನಾಯಕಿ ಪಾತ್ರದಲ್ಲಂತೂ ನಟಿಸುತ್ತಿಲ್ಲ. ವಿಶೇಷ ಪಾತ್ರವೊಂದರಲ್ಲಿ ನಟಿಸಿ ಹೋಗಲಿದ್ದಾರಂತೆ. ಅದಕ್ಕಾಗಿ ಅವರ ಮನ ಒಲಿಸುವ ಕೆಲಸ ನಡೆಯುತ್ತಿದೆ. ನವೆಂಬರ್ 11 ರಂದು ಚಿತ್ರ ಸೆಟ್ಟೇರಲಿದೆಯಂತೆ. ಅಂತೂ ರಮ್ಯಾ ಮತ್ತೆ ತೆರೆಗೆ ಬರಲಿ ಎಂಬುದು ಅವರ  ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಆಗಲಿದೆಯಾ ಗೌರಿ ಲಂಕೇಶ್ ಹತ್ಯೆ?