Publish Date: Mon, 18 Sep 2017 (10:49 IST)
Updated Date: Mon, 18 Sep 2017 (10:55 IST)
ಇವತ್ತು ಸ್ಯಾಂಡಲ್ ವುಡ್`ನ ರಿಯಲ್ ಸ್ಟಾರ್ ಉಪೇಂದ್ರ ಅವರ 49ನೇ ಹುಟ್ಟುಹಬ್ಬ. ನಿನ್ನೆ ರಾತ್ರಿಯಿಂದಲೇ ಕತ್ರಿಗುಪ್ಪೆಯ ಮನೆ ಮುಂದೆ ಜಮಾಯಿಸಿರುವ ಅಭಿಮಾನಿಗಳು ಕೇಕ್ ಕತ್ತರಿಸಿ, ಶುಭಾಷಯ ಕೋರಿ, ಫೋಟೋ ತೆಗೆಸಿಕೊಂಡು ಸಂಭ್ರಮಪಡುತ್ತಿದ್ದಾರೆ.
ಈ ಹಿಂದೆಲ್ಲ ನಟ, ನಿರ್ದೇಶಕರಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಉಪೇಂದ್ರ ಈ ವರ್ಷ ಪ್ರಜಾಕಾರಣಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಈ ವರ್ಷದ ಬರ್ತ್ ಡೇ ನನಗೆ ಸಂತೃಪ್ತಿ ನೀಡಿದ ಬರ್ತ್ ಡೇ, ಇಷ್ಟಪಟ್ಟಿದ್ದನ್ನ ಮಾಡುತ್ತಿದ್ದೇನೆ ಎಂದು ಖಾಸಗಿ ಚಾನಲ್ ಕಾರ್ಯಕ್ರಮದಲ್ಲಿ ಉಪೇಂದ್ರ ಹೇಳಿದ್ದಾರೆ. ನಾವೆಲ್ಲ ಸೇರಿ ಜನರಿಗೆ ಒಳ್ಳೆಯದನ್ನ ಮಾಡಬೇಕು ಎಂದಿದ್ದಾರೆ.
ಉಪೇಂದ್ರ ಬರ್ತ್ ಡೇ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿಶೇಷ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ, `ನಮ್ಮ ಉಪ್ಪಿ ಹತ್ತಿರದವರು ಕಂಡಂತೆ’ ಎಂಬ ಪುಸ್ತಕ ಸಹ ರಿಲೀಸ್ ಆಗಲಿದೆ. ಈಗಾಗಲೇ ಪ್ರಜಾಕೀಯದಲ್ಲಿ ತೊಡಗಿಸಿಕೊಂಡಿರುವ ಉಪ್ಪಿ ಸಿನಿಮಾಗೆ ಫುಲ್ ಸ್ಟಾಪ್ ಇಡುವುದಿಲ್ಲ ಎಂದು ಸಹ ಹೇಳಿದ್ದಾರೆ. ಪ್ರಜಾಕೀಯ ಕಟ್ಟುವ ದೃಷ್ಟಿಯಿಂದ ಕಾರ್ಯೋನ್ಮುಖರಾಗಿರುವ ಉಪೇಂದ್ರ, ಸಾರ್ವಜನಿಕರು ನೀಡಿರುವ ಐಡಿಯಾಗಳನ್ನ ಪರಿಶೀಲೀಸುವ ಕಾರ್ಯದಲ್ಲಿ ತೊಡಗಿದ್ಧಾರೆ. ಮಳೆಯಿಂದ ತೊಂದರೆ ಅನುಭವಿಸುತ್ತಿರುವ ಬೆಂಗಳೂರು ನಗರಕ್ಕೆ ಸುಸಜ್ಜಿತ ಒಳ ಚರಂಡಿ ವ್ಯವಸ್ಥೆಗೆ ಅಮೆರಿಕ ಗೆಳೆಯನೊಬ್ಬ ನೀಡಿದ ವಿಶೇಷ ಯೋಜನೆಯನ್ನ ಜನರ ಮುಂದಿಟ್ಟಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ