Select Your Language

Notifications

webdunia
webdunia
webdunia
webdunia

ಮತ್ತೆ ತೆರೆ ಮೇಲೆ ಆಪ್ತಮಿತ್ರನಾಗಿ ಬರಲಿದ್ದಾರೆ ಸಾಹಸಸಿಂಹ ವಿಷ್ಣುವರ್ಧನ್!

ಮತ್ತೆ ತೆರೆ ಮೇಲೆ ಆಪ್ತಮಿತ್ರನಾಗಿ ಬರಲಿದ್ದಾರೆ ಸಾಹಸಸಿಂಹ ವಿಷ್ಣುವರ್ಧನ್!
ಬೆಂಗಳೂರು , ಶನಿವಾರ, 16 ಸೆಪ್ಟಂಬರ್ 2017 (08:49 IST)
ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಇದೀಗ ನಮ್ಮೊಂದಿಗಿಲ್ಲ. ಹಾಗಿದ್ದರೂ ಅವರನ್ನು ಸಿನಿಮಾಗಳಲ್ಲಿ ತೋರಿಸುವ ಕೆಲಸ ಮಾತ್ರ ಇನ್ನೂ ಮುಂದುವರಿದಿದೆ.

 
ಇತ್ತೀಚೆಗೆ ತೆರೆ ಕಂಡಿದ್ದ ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಬಳಸಿ ಪ್ರೇಕ್ಷಕರಿಗೆ ತೋರಿಸಲಾಗಿತ್ತು. ಇದೀಗ ಮತ್ತೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ಕರೆತರಲಾಗುತ್ತಿದೆ.

ಅದೂ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರ ಆಪ್ತಮಿತ್ರ ಎರಡನೇ ಭಾಗದ ಮೂಲಕ. ಮೊದಲ ಭಾಗ ಮಾಡಿದ್ದ ನಿರ್ದೇಶಕರೇ ಎರಡನೇ ಭಾಗವನ್ನೂ ಮಾಡಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಇದೂ ಕೂಡಾ ಮಲಯಾಳಂ ಸಿನಿಮಾ ‘ಅರಮನೈ’ ಚಿತ್ರದ ರಿಮೇಕ್ ಆಗಿರಲಿದೆಯಂತೆ. ಅಂದ ಹಾಗೆ ವಿಷ್ಣುವರ್ಧನ್ ಅವರನ್ನು ಮತ್ತೆ ರಾಜನ ವೇಷದಲ್ಲಿ ತೋರಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಶಾಂತಿ ಶಾಂತಿ ಎನ್ನುತ್ತಲೇ ಕಾಲು ಕೆರೆಯಲು ಪ್ರಾರಂಭಿಸಿದ ಆಸೀಸ್ ಕ್ರಿಕೆಟಿಗರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅವರಿವರ ಪಕ್ಷ ಸೇರಲ್ಲ, ನನ್ನದೇ ಪಕ್ಷ ಮಾಡುತ್ತೀನಿ: ಕಮಲ್ ಹಾಸನ್