Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್, ಜೋಗಿ ಪ್ರೇಮ್ ನಡುವೆ ನಡೆದ ಚಾಯ್ ಸಂಭಾಷಣೆ!

ಕಿಚ್ಚ ಸುದೀಪ್, ಜೋಗಿ ಪ್ರೇಮ್ ನಡುವೆ ನಡೆದ ಚಾಯ್ ಸಂಭಾಷಣೆ!
ಬೆಂಗಳೂರು , ಗುರುವಾರ, 14 ಸೆಪ್ಟಂಬರ್ 2017 (08:36 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಜೋಗಿ ಪ್ರೇಮ್ ಈಗ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ. ಇಬ್ಬರೂ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರಿಬ್ಬರೂ ಟ್ವಿಟರ್ ನಲ್ಲಿ ಸ್ಮರಣೀಯ  ನೆನಪೊಂದನ್ನು ಮೆಲುಕು ಹಾಕಿಕೊಂಡಿದ್ದಾರೆ.

 
ಚಿಕ್ಕಮಗಳೂರಿನಲ್ಲಿ ಸಣ್ಣ ಅಂಗಡಿಯೊಂದರಲ್ಲಿ ಚಹಾ ಸೇವಿಸಿದ ಬಗ್ಗೆ ಜೋಗಿ ಪ್ರೇಮ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಕೂಡಾ ಪ್ರತಿಕ್ರಿಯಿಸಿದ್ದಾರೆ.

‘ಡಾರ್ಲಿಂಗ್ ಕಿಚ್ಚ ಜತೆ ಸಣ್ಣ ಕ್ಯಾಂಟೀನ್ ಒಂದರಲ್ಲಿ ಚಹಾ ಸೇವಿಸುತ್ತಿದ್ದೇನೆ. ಇಲ್ಲಿನ ಚಳಿ ವಾತಾವರಣಕ್ಕೆ ಇದು ಅದ್ಭುತ ಅನುಭವವಾಗಿದೆ’ ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ‘ಇಂತಹ ಸಣ್ಣ ಕ್ಯಾಂಟೀನ್ ಗಳಲ್ಲೇ ಬೆಸ್ಟ್ ಚಹಾ ಸಿಗುವುದು. ಈ ಅನುಭವ ಅದ್ಭುತ’ ಎಂದು ಬಾಯಿ ಚಪ್ಪರಿಸಿದ್ದಾರೆ.

ಇದನ್ನೂ ಓದಿ.. ಮತ್ತೆ ಸ್ಮಿತ್ v/s ಕೊಹ್ಲಿ ವಾದಕ್ಕೆ ನಾಂದಿ ಹಾಡಿದ್ರಾ ಆಸೀಸ್ ನ ಮಾಜಿ ನಾಯಕ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರಬರಲ್ಲ!