Publish Date: Mon, 18 Sep 2017 (11:33 IST)
Updated Date: Mon, 18 Sep 2017 (11:35 IST)
ಬೆಂಗಳೂರು: ಕಿಚ್ಚ ಸುದೀಪ್ ಗೆ ಸೆಪ್ಟೆಂಬರ್ 18 ನೇ ದಿನಾಂಕ ಅಂದರೆ ಇಂದಿನ ದಿನ ಯಾವತ್ತಿಗೂ ಸ್ಪೆಷಲ್ ಅಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚನಿಗೆ ಈವತ್ತು ಯಾಕೆ ಸ್ಪೆಷಲ್? ಅವರೇ ಹೇಳಿದ್ದಾರೆ ಕೇಳಿ.
ಯಾಕೆಂದರೆ ಈವತ್ತು ಕಿಚ್ಚ ಬಹುವಾಗಿ ಆರಾಧಿಸುವ ಸಾಹಸ ಸಿಂಹ ವಿಷ್ಣುವರ್ಧನ್ ಬರ್ತ್ ಡೇ. ತಮ್ಮ ನೆಚ್ಚಿನ ನಾಯಕನ ಜನುಮದಿನಕ್ಕೆ ವಿಶೇಷವಾಗಿ ಟ್ವೀಟ್ ಮಾಡಿರುವ ಕಿಚ್ಚ, ಸಾಹಸ ಸಿಂಹ ನನ್ನ ಹೀರೋ ಎಂದಿದ್ದಾರೆ.
ವಿಷ್ಣುವರ್ಧನ್ ಜತೆಗಿನ ಫೋಟೋ ಪ್ರಕಟಿಸಿರುವ ಕಿಚ್ಚ ಸುದೀಪ್ ‘ಅವರು ನನ್ನ ಹೀರೋ.. ಯಾವತ್ತಿಗೂ ಅವರೇ ಹೀರೋ. ಅವರು ನನಗೆ ಯಾವತ್ತಿಗೂ ವಿಶೇಷ. ಇಂದಿನ ದಿನವೂ ನನಗೆ ಯಾವತ್ತಿಗೂ ವಿಶೇಷ’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ವಿಷ್ಣುವರ್ಧನ್ ಮೇಲಿನ ಕಿಚ್ಚನ ಅಭಿಮಾನ ಇಂದು ನಿನ್ನೆಯದಲ್ಲ. ವಿಷ್ಣುವರ್ಧನ್ ಹೆಸರಿನ ಸಿನಿಮಾವೊಂದರಲ್ಲಿ ಸುದೀಪ್ ಅಭಿನಯಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ