Publish Date: Tue, 19 Sep 2017 (11:38 IST)
Updated Date: Tue, 19 Sep 2017 (11:40 IST)
ಮುಂಬೈ: ಧೋನಿ ಇದೀಗ ಇದ್ದಕ್ಕಿದ್ದಂತೆ ಸಿಡಿಯುವುದಕ್ಕೆ ಕಾರಣ ವಿರಾಟ್ ಕೊಹ್ಲಿಯಂತೆ! ಹಾಗಂತ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ನಾಯಕತ್ವ ತ್ಯಜಿಸಿದ ಮೇಲೆ ಧೋನಿ ಭವಿಷ್ಯದ ಬಗ್ಗೆ ಹಲವು ಹಲವು ರೀತಿಯಲ್ಲಿ ಮಾತನಾಡಿದ್ದರು. ಆದರೆ ಧೋನಿ ಪ್ರತೀ ಪಂದ್ಯದಲ್ಲೂ ಭಾರತದ ಪಾಲಿಗೆ ಆಪತ್ಬಾಂಧವನಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಕೊಹ್ಲಿ ಧೋನಿ ಮೇಲಿಟ್ಟಿರುವ ಅಪಾರವಾದ ನಂಬಿಕೆ ಎಂದು ಗಂಗೂಲಿ ಹೇಳಿದ್ದಾರೆ.
ನಾಯಕನಾಗಿ ಕೊಹ್ಲಿ ಧೋನಿ ಮೇಲೆ ಅಪಾರ ವಿಶ್ವಾಸವಿಟ್ಟರು. ಹೀಗಾಗಿಯೇ ಧೋನಿಗೆ ತಮ್ಮದೇ ಶೈಲಿಯಲ್ಲಿ ಆಡಲು ಸಾಧ್ಯವಾಗಿದೆ. ಕೊಹ್ಲಿ ವಿಶ್ವಾಸವನ್ನು ಧೋನಿ ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾವುದೇ ಆಟಗಾರನಿಗೂ ನಾಯಕನ ವಿಶ್ವಾಸ ಮುಖ್ಯವಾಗುತ್ತದೆ. ನಾಯಕನ ವಿಶ್ವಾಸ ಕಳೆದುಕೊಂಡರೆ ಆಡಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ