Publish Date: Tue, 19 Sep 2017 (11:05 IST)
Updated Date: Tue, 19 Sep 2017 (11:09 IST)
ಮುಂಬೈ: ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್ ಇಷ್ಟಪಡುವವರು ಎಲ್ಲರೂ ಸಚಿನ್ ತೆಂಡುಲ್ಕರ್ ರನ್ನು ಆರಾಧಿಸುತ್ತಾರೆ. ಆದರೆ ಭಾರತ ಮಹಿಳಾ ತಂಡದ ಈ ಆಟಗಾರ್ತಿಗೆ ಸಚಿನ್ ಸ್ಪೂರ್ತಿಯಲ್ಲವಂತೆ!
ಅವರು ಸ್ಮೃತಿ ಮಂದಣ್ಣ. ಮಹಿಳಾ ವಿಶ್ವಕಪ್ ನಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರಕಿಸಿಕೊಡುತ್ತಿದ್ದ ಈಕೆಯ ಆಟದ ಶೈಲಿಯನ್ನು ಸೆಹ್ವಾಗ್ ಗೆ ಹೋಲಿಸಲಾಗುತ್ತಿತ್ತು. ಹೊಡೆ ಬಡಿಯ ಆಟಗಾರ್ತಿಗೆ ಕ್ರಿಕೆಟ್ ನಲ್ಲಿ ಸ್ಪೂರ್ತಿ ಎಂದರೆ ಸಚಿನ್ ತೆಂಡುಲ್ಕರ್ ಅಥವಾ ಇತರ ಪುರುಷ ಕ್ರಿಕೆಟಿಗರಲ್ಲವಂತೆ.
ನನಗೆ ಸ್ಪೂರ್ತಿ ಎಂದು ಬೇಕಾದರೆ ನಾನು ನೋಡುವುದು ನಮ್ಮ ನಾಯಕಿ ಮಿಥಾಲಿ ರಾಜ್ ರನ್ನು. ಅವರೇ ನನಗೆ ಸ್ಪೂರ್ತಿ. ನನಗೆ ಮಾತ್ರವಲ್ಲ, ಈ ದೇಶದಲ್ಲಿ ಮಹಿಳೆಯರು ಕ್ರಿಕೆಟರ್ ಆಗಬೇಕೆಂದು ಹೊರಡುವವರೆಲ್ಲಾ ಮಿಥಾಲಿ ರಾಜ್ ರನ್ನು ನೋಡಿ ಸ್ಪೂರ್ತಿ ಪಡೆಯುತ್ತಾರೆ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸ್ಮೃತಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ