Publish Date: Mon, 11 Sep 2017 (09:54 IST)
Updated Date: Mon, 11 Sep 2017 (09:59 IST)
ಮುಂಬೈ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅಪ್ಪನ ಹಾದಿ ಹಿಡಿಯಲು ಮತ್ತೊಂದು ಹೆಜ್ಜೆ ಹಾಕಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ಸತತ ಅಭ್ಯಾಸ ನಡೆಸುತ್ತಿರುವ ಅರ್ಜುನ್ ತೆಂಡುಲ್ಕರ್ ಮಹಿಳಾ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಭಾರತದ ಮಹಿಳಾ ಆಟಗಾರ್ತಿಯರಿಗೆ ಬೌಲಿಂಗ್ ನಡೆಸಿದ್ದರು. ಇಂಗ್ಲೆಂಡ್ ಆಟಗಾರರಿಗೂ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರು.
ಅಂಡರ್ 14, ಅಂಡರ್ 16 ತಂಡದಲ್ಲಿ ಆಡಿದ ಅನುಭವ ಹೊಂದಿರುವ ಅರ್ಜುನ್ ಸೆಪ್ಟೆಂಬರ್ 16 ರಿಂದ ನಡೆಯಲಿರುವ ಜೆವೈ ಲೆಲೆ ಅಖಿಲ ಭಾರತ ಅ-19 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ.