Select Your Language

Notifications

webdunia
webdunia
webdunia
webdunia

ನಾನು ಚೆನ್ನಾಗಿ ಆಡಿದ್ರೂ ಸುದ್ದಿ, ಆಡದಿದ್ರೆ ಬಹುದೊಡ್ಡ ಸುದ್ದಿ: ಆಶೀಶ್ ನೆಹ್ರಾ

ನಾನು ಚೆನ್ನಾಗಿ ಆಡಿದ್ರೂ ಸುದ್ದಿ, ಆಡದಿದ್ರೆ ಬಹುದೊಡ್ಡ ಸುದ್ದಿ: ಆಶೀಶ್ ನೆಹ್ರಾ
ನವದೆಹಲಿ , ಮಂಗಳವಾರ, 3 ಅಕ್ಟೋಬರ್ 2017 (17:07 IST)
ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಮತ್ತೆ ಮರಳಿರುವ ಅನುಭವಿ ಆಟಗಾರ 38ನೇ ವಯಸ್ಸಿನ ಆಶೀಶ್ ನೆಹ್ರಾ,ಕೆಲವರ ಟೀಕೆ, ಅನುಮಾನಗಳಿಗೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶ ನೀಡುವ ಮೂಲಕ ಉತ್ತರಿಸುವುದಾಗಿ ತಿಳಿಸಿದ್ದಾರೆ.   
ಪ್ರಸಕ್ತ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನಾಡಿರುವ ನೆಹ್ರಾ, ಐಪಿಎಲ್‌ನಲ್ಲಿ ಗಾಯಗೊಂಡು ವಿಶ್ರಾಂತಿ ಪಡೆದಿದ್ದರು. ಇದೀಗ ಟಿ-20 ಸರಣಿಯ ಮೂರು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
 
 ಭಾರತಕ್ಕಾಗಿ ಆಡುತ್ತಿದ್ದರೆ ಯಾರು ಸಂತೋಷಪಡುವುದಿಲ್ಲ? ನಾನು ಟೀಕೆಗಳಿಗೆ ಹೆದರಲ್ಲ, ಯಾವ ರೀತಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತರಬೇಕು ಎನ್ನುವುದು ನನಗೆ ತಿಳಿದಿದೆ ಎಂದು ಆಯ್ಕೆದಾರರಿಗೆ ಗೊತ್ತಿದೆ. ನಾನು ತಂಡದಲ್ಲಿದ್ದಾಗ ತಂಡಕ್ಕೆ ಯಾವ ರೀತಿ ಕೊಡುಗೆ ಕೊಡಬೇಕು ಎನ್ನುವುದು ನನಗೆ ತಿಳಿದಿದೆ ಎಂದರು. 
 
ಅವರ ಗುರಿಗಳ ಬಗ್ಗೆ ಕೇಳಿದಾಗ, ನೆಹ್ರಾ ಉತ್ತರಿಸುತ್ತಾ, "ನನ್ನ ವಯಸ್ಸಿನಲ್ಲಿ, ನೀವು ದೀರ್ಘಾವಧಿಯ ಗುರಿಗಳನ್ನು ನಿಗದಿಪಡಿಸುವುದು ಸರಿಯಲ್ಲ. ನಾನು ತಂಡದಲ್ಲಿ ಮೂರು ಪಂದ್ಯಗಳನ್ನು ಆಡಲು ಆಯ್ಕೆಯಾಗಿದ್ದೇನೆ.  ನಾನು ಒಂದು ಸಮಯದಲ್ಲಿ ಒಂದು ಪಂದ್ಯದ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.
 
(ವೈಸ್ ಭಿ ಆಶಿಶ್ ನೆಹ್ರಾ ಅಚ್ಚಾ ಕರೇಗಾ ತೋ ಭಿ ನ್ಯೂಸ್ ಹೈ, ಅಚ್ಚಾ ನಹೀ ಕರೇಗಾ ತೋ ವೋ ಭಿ ಬಡಿ ನ್ಯೂಸ್)  ನಾನು ಚೆನ್ನಾಗಿ ಆಡಿದರೆ ಸುದ್ದಿಯಾಗುತ್ತದೆ, ನಾನು ಚೆನ್ನಾಗಿ ಆಡದಿದ್ದರೆ, ಅದು ಇನ್ನೂ ದೊಡ್ಡ ಸುದ್ದಿಯಾಗುತ್ತದೆ ಎಂದು ಆಶೀಶ್ ನೆಹ್ರಾ ನಗೆಯಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಬಳಗವನ್ನ ಕಂಡರೆ ಸ್ಮಿತ್ ಪಡೆ ಬೆಚ್ಚಿ ಬೀಳುತ್ತೆ: ಆಸೀಸ್ ಕೋಚ್