Select Your Language

Notifications

webdunia
webdunia
webdunia
webdunia

ವಿರಾಟ್ ಬಳಗವನ್ನ ಕಂಡರೆ ಸ್ಮಿತ್ ಪಡೆ ಬೆಚ್ಚಿ ಬೀಳುತ್ತೆ: ಆಸೀಸ್ ಕೋಚ್

ವಿರಾಟ್ ಬಳಗವನ್ನ ಕಂಡರೆ ಸ್ಮಿತ್ ಪಡೆ ಬೆಚ್ಚಿ ಬೀಳುತ್ತೆ: ಆಸೀಸ್ ಕೋಚ್
ಮುಂಬೈ , ಮಂಗಳವಾರ, 3 ಅಕ್ಟೋಬರ್ 2017 (15:50 IST)
4-1 ಅಂತರದಿಂದ ಭಾರತದ ವಿರುದ್ಧ ಏಕದಿನ ಸರಣಿ ಸೋತಿರುವ ಆಸ್ಟ್ರೇಲಿಯಾ ತಂಡ ಟಿ-20 ಸರಣಿಯಲ್ಲಿ ಕಮ್ ಬ್ಯಾಕ್ ಮಾಡುವ ನಂಬಿಕೆ ಆಸೀಸ್ ಅಭಿಮಾನಿಗಳಲ್ಲಿದೆ. ಆದರೆ, ಆಟಗಾರರಲ್ಲಿ ಆ ವಿಶ್ವಾಸ ಇಲ್ಲ. ವಿರಾಟ್ ಕೊಹ್ಲಿ ಬಳಗವನ್ನ ಮುಖಾಮುಖಿಯಾಗುವುದಕ್ಕೆ ಸ್ಟೀವನ್ ಸ್ಮಿತ್ ಬಳಗ ಬೆದರುತ್ತಿದೆ ಎಂದು ಆಸೀಸ್ ಕೋಚ್ ಡೇವಿಡ್ ಸಾಕೇರ್ ಹೇಳಿದ್ದಾರೆ.
  

ಹೌದು, ವಿರಾಟ್ ಕೊಹ್ಲಿ ಬಳಗವನ್ನ ತವರು ನೆಲದಲ್ಲಿ ಮಣಿಸುವ ಬಗ್ಗೆ ಸ್ಮಿತ್ ಬಳಗದಲ್ಲಿ ಆತಂಕವಿತ್ತು. ಹಾಗಾಗಿಯೇ ಈ ಕಳಪೆ ಪ್ರದರ್ಶನ ಬಂದಿದೆ ಎಂದು ಕೋಚ್ ಹೇಳಿದ್ದಾರೆ. ಇದು ಆಟಗಾರರ ಮನಸ್ಥಿತಿಯ ಸಮಸ್ಯೆ. ತಂಡದ ಹಲವು ಆಟಗಾರರು ಆತಂಕದಲ್ಲಿದೆ ಆಡುತ್ತಿದ್ದಾರೆ. ಆತಂಕಕ್ಕೆ ಆಸ್ಪದವಾಗಬಾರದೆಂದು ಸ್ವತಂತ್ರವಾಗಿ ಆಡಲು ಬಿಟ್ಟಿದ್ದೇವೆ. ಆದರೂ ಸಾಧ್ಯವಾಗುತ್ತಿಲ್ಲ. ಪಂದ್ಯ ಸೋತಾಗ ಆ ಆತಂಕ ಹೆಚ್ಚಾಗುತ್ತದೆ.

ವಿಶ್ವದ ನಂಬರ್ 1 ತಮಡವನ್ನು ಎದುರಿಸುವಾಗ ಅಂತಹ ಆತಂಕ ಸಹಜ. ಮುಂದಿನ ದಿನಗಳಲ್ಲಿ ಆತಂಕ ಬದಿಗಿಟ್ಟು ಆಡುವ ವಿಶ್ವಾಸವಿದೆ. ಅಂತಹ ಪ್ರತಿಭೆಗಳೂ ನಮ್ಮಲ್ಲಿವೆ ಎಂದು ಸಾಕೇರ್ ಹೇಳಿದ್ಧಾರೆ. ವಿಶ್ವಕಪ್`ಗೆ 2 ವರ್ಷ ಬಾಕಿ ಇರುವ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡ ವಿದೇಶಗಳಲ್ಲಿ ನೀಡುತ್ತಿರುವ ಪ್ರದರ್ಶನದ ಬಗ್ಗೆ ಕೋಚ್ ಆತಂಕ ವ್ಯಕ್ತಪಡಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಶಿಷ್ ನೆಹ್ರಾಗೆ ನಾಚಿಕೆಯಾಗುತ್ತಿದೆಯಂತೆ! ಕಾರಣ ನೀವೇ ಓದಿ