Publish Date: Tue, 03 Oct 2017 (10:21 IST)
Updated Date: Tue, 03 Oct 2017 (10:23 IST)
ನಾಗ್ಪುರ: ವಿಕೆಟ್ ಕೀಪರ್ ಧೋನಿ ರಿವ್ಯೂ ತೆಗೆದುಕೊಳ್ಳುವ ವಿಚಾರದಲ್ಲಿ ಪಕ್ಕಾ ಪ್ರವೀಣ ಎಂದೇ ಹೆಸರುವಾಸಿ. ಆದರೆ ಆಸ್ಟ್ರೇಲಿಯಾ ವಿರುದ್ಧ ಐದನೇ ಏಕದಿನ ಪಂದ್ಯದಲ್ಲಿ ತಾವೂ ಎಡವಿ ನಾಯಕ ಕೊಹ್ಲಿಯನ್ನೂ ಮೂರ್ಖನಾಗಿಸಿದ್ದಾರೆ.
ಇದು 37 ನೇ ಓವರ್ ನಲ್ಲಿ ಆಸೀಸ್ ಬ್ಯಾಟ್ಸ್ ಮನ್ ಟ್ರವಿಸ್ ಹೀಡ್ ಹೊಡೆದ ಬಾಲ್ ನ್ನು ಧೋನಿ ತೀರಾ ಕೆಳಹಂತದಲ್ಲಿ ಕ್ಯಾಚ್ ಮಾಡಿದ್ದರು. ಆದರೆ ಅಂಪಾಯರ್ ಔಟ್ ನೀಡಲಿಲ್ಲ. ತಕ್ಷಣವೇ ಧೋನಿ ಕೊಹ್ಲಿ ಕಡೆಗೆ ತಿರುಗಿ ರಿವ್ಯೂ ತೆಗೆದುಕೊಳ್ಳಲು ಸಲಹೆ ನೀಡಿದರು.
ಧೋನಿ ಮಾತು ನಂಬಿ ಕೊಹ್ಲಿ ರಿವ್ಯೂಗೆ ಮನವಿ ಮಾಡಿದರು. ಆದರೆ ರಿಪ್ಲೇಯಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ಭಾರೀ ಅಂತರವಿರುವುದು ಸ್ಪಷ್ಟವಾಯಿತು. ಹೀಗಾಗಿ ಕೊಹ್ಲಿ ಧೋನಿ ಮಾತು ನಂಬಿ ಮೂರ್ಖರಾದರು. ಅಲ್ಲದೆ, ಈ ಘಟನೆಯನ್ನು ನೋಡಿ ಎದುರಾಳಿ ನಾಯಕ ಸ್ಟೀವ್ ಸ್ಮಿತ್ ತಮಾಷೆ ಮಾಡಿ ನಗುತ್ತಿದ್ದುದು ಉರಿವ ಗಾಯಕ್ಕೆ ಉಪ್ಪು ಸುರಿದಂತಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ