Publish Date: Sun, 01 Oct 2017 (07:19 IST)
Updated Date: Sun, 01 Oct 2017 (07:20 IST)
ಮುಂಬೈ: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಭಾರತಕ್ಕೆ ಎರಡು ಬಾರಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಚತುರ ನಾಯಕ. ಹಾಗಿದ್ದರೂ ಧೋನಿಯನ್ನು ಭಾರತ ತಂಡದಿಂದ ನಿಷೇಧಿಸಲು ಇವರು ಸಲಹೆ ನೀಡಿದ್ದರಂತೆ! ಅವರು ಯಾರು?
ಮೊನ್ನೆಯಷ್ಟೇ ನಿಧನರಾದ ನಟ, ಕ್ರಿಕೆಟ್ ವಿಶ್ಲೇಷಕ ಟಾಮ್ ಆಲ್ಟರ್ ಧೋನಿಯನ್ನು ನಿಷೇಧಿಸುವಂತೆ ಸಲಹೆ ನೀಡಿದ್ದರು. ಅದು ಧೋನಿ 2014 ರಲ್ಲಿ ಆಸ್ಟ್ರೇಲಿಯಾ ಸರಣಿಯ ಮಧ್ಯಭಾಗದಲ್ಲೇ ನಾಯಕತ್ವಕ್ಕೆ ವಿದಾಯ ಹೇಳಿದಾಗ.
‘ಆತನಿಗೆ ಮತ್ತೆ ಭಾರತ ತಂಡ ಪ್ರತಿನಿಧಿಸಲು ಅವಕಾಶ ಕೊಡಬಾರದು. ಇವರೆಲ್ಲಾ ತಂಡಕ್ಕಿಂತ ತಮ್ಮ ಮಾರುಕಟ್ಟೆ ಮೌಲ್ಯ ನೋಡಿಕೊಂಡು ಆಡುತ್ತಾರೆ. ಸರಣಿಯ ಮಧ್ಯದಲ್ಲೇ ರಾಜೀನಾಮೆ ಕೊಡುವ ಮೂಲಕ ಅವರು ಅಭಿಮನಿಗಳ ಮತ್ತು ತಂಡದ ವಿಶ್ವಾಸಕ್ಕೆ ದ್ರೋಹವೆಸಗಿದ್ದಾರೆ’ ಎಂದು ಆಲ್ಟರ್ ಆಕ್ರೋಶ ವ್ಯಕ್ತಪಡಿಸಿದ್ದರಂತೆ. ಇದೇ ಆಲ್ಟರ್ ಮೊದಲ ಬಾರಿಗೆ ಸಚಿನ್ ತೆಂಡುಲ್ಕರ್ ರನ್ನು ಸಂದರ್ಶನ ಮಾಡಿದ್ದರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ